ಕಾರಣ ಹೇಳದೆ ಸ್ನೇಹ ತೊರೆಯುವರು
ಕಾರಣ ಹೇಳದೆ ಸ್ನೇಹ ತೊರೆಯುವರು
ಈ ವಿಶ್ವದಲ್ಲಿ ನಾವು ತಂದೆ ತಾಯಿಯನ್ನು ದೇವರು ಎನ್ನುತ್ತೇವೆ. ಆದ್ರೆ ಯಾವತ್ತೂ ಎಲ್ಲಾ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳುವದಿಲ್ಲ. ಸಾಕಷ್ಟು ಭಾವನೆಗಳನ್ನು ನಾವು ಅವರಿಂದ ಮುಚ್ಚಿಡುತ್ತೇವೆ.
ಹೀಗಿರುವಾಗ ನಾವು ಅತೀ ಆತ್ಮೀಯ ಸ್ನೇಹಿತರೊಂದಿಗೆ ಎಲ್ಲವನ್ನು ಹಂಚಿಕೊಳ್ಳುತ್ತೇವೆ.
ಯಾಕೇ? ಬಿಟ್ಟು ಹೋಗಲಿ ಎಂದೇ ಖಂಡಿತಾ ಇಲ್ಲಾ. ಹೆತ್ತವರಿಗಿಂತಲೂ ಹೆಚ್ಚು ಸಲಿಗೆ ಸ್ನೇಹಿತರೊಂದಿಗೆ ಸ್ನೇಹದಲ್ಲಿದೆ ಎಂಬ ಕಾರಣಕ್ಕೇ.
ವಾಸ್ತವದಲ್ಲಿ ಕೆಲವರು ಸ್ವಾರ್ಥ ಸಾಧನೆಗಾಗಿ ಸ್ನೇಹ ಬೆಳೆಸುತ್ತಾರೆ. ಅವಶ್ಯಕತೆ ಮುಗಿದ ಬಳಿಕ ಅವರಿಗೆ ಸ್ನೇಹಿತರು ಬೇಕಿಲ್ಲಾ.
"ಹೇಳಿ ಹೋಗು ನೀ ಕಾರಣವೆಂದರೆ, ಹೋಗುವ ಮುನ್ನ ಕಾರಣ ಹೇಳದೇ ಹೋಗು ಎನ್ನುವರು ಕೆಲವರು ಇಂದು ಜಗದಲಿ "
ಸಣ್ಣ ಪುಟ್ಟ ವಿಷಯಕ್ಕೇ ಮನಸ್ತಾಪ ಮಾಡಿಕೊಂಡು ದೂರ ಹೋಗುತ್ತಾರೆ.
ಆ ಸ್ನೇಹಿತರಿಗಾಗಿ ಚಿಂತಿಸಿ ಫಲವಿಲ್ಲ.'past is past, leave it'.
ನಿಮ್ಮ ಸ್ನೇಹ ಪ್ರೀತಿ ಬಯಸಿ ಬರುವವರಿಗೆ ನಿಮ್ಮ ಹೃದಯದಲ್ಲಿ ಜಾಗವಿರಲಿ,ಬಿಟ್ಟು ಹೋಗುವವರಿಗೆ ವಿದಾಯ ಹೇಳಿ ಮರೆತುಬಿಡಿ.
ನಿಮ್ಮ ಜೀವನದಲ್ಲಿ ಅವರ ಪಾತ್ರ ಅಷ್ಟೇ ಇತ್ತು ಎಂದು ಮತ್ತು ದೇವರು ಅವರಿಗಿಂತ ಒಳ್ಳೆಯ ವ್ಯಕ್ತಿಯನ್ನು ನಿಮ್ಮ ಬಾಳಲ್ಲಿ ನೀಡುತ್ತಾನೆ ಎಂಬ ನಂಬಿಕೆಯಲಿ ಬದುಕಿರಿ.
ಅರ್ಹತೆ ಉಳ್ಳವರು ಉಳಿಯುತ್ತಾರೆ, ಅನರ್ಹರು ಅಳಿಯುತ್ತಾರೆ. ಅನರ್ಹರ ಸ್ನೇಹಕ್ಕೇ ತಲೆ ಕೆಡಿಸಿಕೊಳ್ಳದೇ ಮುಂದೆ ಸಾಗುತ್ತಿರಬೇಕು.
