ಜನ್ಮ ಭೂಮಿ
ಜನ್ಮ ಭೂಮಿ
ದಿನ ೨೯
ವಿಷಯ :ನನ್ನ ದೇಶ
ಜನ್ಮಭೂಮಿ
ಸುನಿಲ್ ಗೆ ಬಹಳ ದಿನಗಳ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದ್ದಂತೆ , ಅವನ ಮೈ ಪುಳಕಗೊಳ್ಳುತ್ತಿತ್ತು.
ಇತ್ತೀಚೆಗೆ ಅವನಿಗೆ ತನ್ನ ದೇಶ ಭಾರತಕ್ಕೆ ಎಂದು ಹಿಂದಿರುವೆನೋ ಎಂಬಂತಾಗಿತ್ತು. ತಾನು ಕೈಗೊಂಡಿದ್ದ ಪ್ರಾಜೆಕ್ಟ್ ಕೆಲಸಗಳನ್ನು ಬೇಗ ಬೇಗ ಮುಗಿಸುತ್ತಿದ್ದ.
ಐದು ವರ್ಷಗಳ ನಂತರ ತನ್ನ ಸ್ವದೇಶಕ್ಕೆ ಮರಳಲಿದ್ದ ಅವನಿಗೆ, ರಾತ್ರಿ ನಿದ್ರೆಯಲ್ಲಿ,ಭಾರತದ ನಕಾಶೆ ಹಾಗೂ ರಾಷ್ಟ್ರ ಧ್ವಜಗಳು ಕಾಣಿತೊಡಗಿದವು.
ತನ್ನ ತಾಯಿ ತಂದೆಯರನ್ನು ಎಂದು ಸೇರುವೆನೋ?ಎಂದು ಕ್ಷಣಗಣನೆ ಮಾಡುತ್ತಿದ್ದನು . ಅಮೆರಿಕದ ಅವನ ಕಂಪನಿ ಯವರಿಗೆ ಅವನನ್ನು ಭಾರತಕ್ಕೆ ಕಳುಹಿಸಿ ಕೊಡಲು ಸ್ವಲ್ಪವೂ ಇಷ್ಟವಿರಲಿಲ್ಲ. ಸುನಿಲನ ಮನವೊಲಿಸಿ ಅಲ್ಲೇ ಉಳಿಸಿಕೊಳ್ಳಲುತುಂಬಾ ಪ್ರಯತ್ನ ಪಟ್ಟರೂ, ಸುನಿಲ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.ಅವನಿಗೆ ತನ್ನ ಸ್ವದೇಶದಲ್ಲಿ ಸೇವೆ ಮಾಡಬೇಕೆಂಬ ಮಹದಾಸೆ ಇತ್ತು. ಜೊತೆಗೆ ಭಾರತದಲ್ಲಿ ತನಗಾಗಿ ಕಾಯುತ್ತಿದ್ದ ತನ್ನ ತಂದೆ ತಾಯಿಯರನ್ನು ನಿರಾಸೆಗೊಳಿಸಲು ಅವನಿಗೆ ಇಷ್ಟವಿರಲಿಲ್ಲ. "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ"ಎಂಬ ಶ್ರೀರಾಮಚಂದ್ರನ ವಾಕ್ಯ ಅವನನ್ನುಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.
ಕಡೆಗೂ ಆ ದಿನ ಬಂದೇ ಬಿಟ್ಟಿತು. ಅಮೇರಿಕಾದ ಕಂಪನಿಯನ್ನು ಬಿಟ್ಟು, ಭಾರತಕ್ಕೆ ಹೊರಟೇ ಬಿಟ್ಟ ಸುನಿಲ್. ಹಿಂದಿನ ರಾತ್ರಿ ಅವನಿಗೆ ನಿದ್ರೆ ಬರಲಿಲ್ಲ. ತಾನು ಯಾವಾಗ ತನ್ನ ಹೆತ್ತವರನ್ನು ತನ್ನನ್ನು ಪೊರೆದ ಭೂಮಿಯನ್ನು ನೋಡುತ್ತೇನೋ ಎಂಬ ಕಾತುರತೆ ಅವನಲ್ಲಿ ಮನೆ ಮಾಡಿತು. ಕ್ಯಾಲಿಫೋರ್ನಿಯಾ ಏರ್ ಪೋರ್ಟ್ ಗೆ ಬಂದು, ಎರ್ ಇಂಡಿಯಾ ವಿಮಾನ ಏರಿದ. ಎರಡು ದಿನಗಳ ಪ್ರಯಾಣ ದ ನಂತರ ವಿಮಾನವು ನವದೆಹಲಿಗೆ ಬಂದಿಳಿದಾಗ, ಸುನಿಲ್ ಸಂತೋಷಕ್ಕೆ ಪಾರವೇ ಇರಲಿಲ್ಲ. ಇವನನ್ನು ರಿಸೀವ್ ಮಾಡಲು ಏರ್ಪೋರ್ಟ್ಗೆ ಬಂದಿದ್ದ, ತನ್ನ ತಾಯಿ ಮತ್ತು ತಂದೆಯರನ್ನು ಬಿಗಿದಪ್ಪಿದ. ತಮ್ಮ ಮಗ ಸುನಿಲ್ ಬೇರೆ ಯುವಕರಂತಿರದೆ, ತನ್ನ ದೇಶದಲ್ಲಿ ತನ್ನ ಸೇವೆಯನ್ನು ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಅವನ ತಂದೆ ತಾಯಿಗೆ ಹೆಮ್ಮೆ ಎನಿಸಿತು.
