ಹುಡುಗಿಯರ ಹಾಸ್ಟೆಲ್
ಹುಡುಗಿಯರ ಹಾಸ್ಟೆಲ್
ಸಂಜೆ ಸುಮಾರು 5.20 ಹಾಸ್ಟೆಲ್ ನಲ್ಲಿ ಶಬ್ದ ಜೋರಾಗಿ ಕೇಳಿಬರುತಿತ್ತು ಹಾಸ್ಟೆಲ್ ವಾರ್ಡನ್ ರಾಧಮ್ಮ ಇಣುಕಿ ನೊಡಿದಳು ಒಂದು ಕಡೆ ಹುಡುಗಿಯರು ಏನೊ ಹೇಳಿ ನಗುತಿದ್ದರು ಮತ್ತೊಂದು ಕಡೆ ಕೆಲ ಇಂಜಿನಿಯರಿಂಗ್ ಹುಡುಗಿಯರು ಗಣಿತದ ಎಂ1 ಸಮಸ್ಯೆಗಳನ್ನು ಪರಿಹರಿಸುತಿದ್ದರು. ಎಲ್ಲರಿಗೂ ಒಂದೆ ಉತ್ತರ ಬಂದಿರಲಿಲ್ಲ ಆದರೆ ಸರಿಯಾದ ಉತ್ತರಕ್ಕಾಗಿ ಅವರ ಪ್ರಯತ್ನ ನಡೆದಿತ್ತು ಪರಿಣಿತಾ ತಲೆನೋವು ಅಂತ ಮಲಗಿದ್ದಳು. ಇನ್ನು ಉಳಿದವರು ಆಕಡೆಯಿಂದ ಈಕಡೆ ಓಡಾಡುತ್ತಿದ್ದರು. ರಾಧಮ್ಮ ಬಾಗಿಲು ತಟ್ಟಿ ಎಲ್ಲರು ಟೀ ಕುಡಿಯಲು ಬರ ಹೆಳಿದಳು. ಮಲಗಿರುವ ಪರಿಣಿತಾಳನ್ನು ವಿಚಾರಿಸಿ ಟೀ ಕುಡಿದು ಬರುವುದಕ್ಕೆ ಹೇಳಿದಳು ಹಾಗೆಯೇ ತಮ್ಮ ತಮ್ಮ ಬ್ಯಾಗ್ ಮತ್ತು ಪುಸ್ತಕಗಳನ್ನು ಸರಿಯಾಗಿ ಜೊಡಿಸಿಕೊಂಡು ಇಟ್ಟುಕೊಳ್ಳಲು ಸಲಹೆ ಮಾಡಿದಳು. ಮುಂದೆ ಎಲ್ಲಾ ಕೊಣೆಗಳಿಗೆ ಹೋಗಿ ಹುಡುಗಿಯರಿಗೆ ತಮ್ಮ ವಸ್ತುಗಳನ್ನು ಮತ್ತು ಹಾಸ್ಟೆಲ್ ನ ಪಿಠೋಪಕರಣಗಳನ್ನು ಸರಿಯಾಗಿ ಬಳಸಿ ಶಿಸ್ತಾಗಿ ಇಟ್ಟುಕೊಳ್ಳಲು ಹೆಳಿದಳು. ಹಾಗೆಯೆ ಯಾವುದೆ ವಸ್ತುಗಳು ಇಲ್ಲದಿದ್ದಲ್ಲಿ ನನಗೆ ಹೆಳಿ ನಾನು ಸಿನಿಯರ್ ವಾರ್ಡನ್ ಗೆ ತಿಳಿಸುವೆ ಎಂದು ಹೆಳಿ ಅಲ್ಲಿಂದ ಹೊದಳು. ಎಲ್ಲಾ ಹುಡುಗಿಯರು ಟೀ ಕುಡಿದು ಊಟಮಾಡುವ ಕೊಣೆಯಿಂದ ಹೊರಗಡೆ ಬಂದರು. ಹೊರಗಡೆಯಿಂದ ಏನೊ ಕೂಗು ಕೇಳಿ ಬರುತ್ತಿತ್ತು ಆದರೆ ಸ್ಪಷ್ಟ ಇರಲಿಲ್ಲ. ಹುಡುಗಿಯರು ಕೋಣೆಗೆ ಹೊಗದೆ ಹಾಸ್ಟೆಲ್ ನ ಸಭಾಂಗಣದಲ್ಲಿ ನಿಂತರು. ಇನ್ನು ಜೋರಾಗಿ ಕೇಳಿ ಬರುತ್ತಿತ್ತು ಪ್ರಚಾರದ ಕೂಗು ಹಾಸ್ಟೆಲ್ ಹೊರಗಡೆ ನಿಂತಿದ್ದ ಹುಡುಗರ ಹಾಸ್ಟೆಲ್ ನ ಒಂದು ಗುಂಪು "ದಿ ಬಕ್ಸ ಸ್ಟಾಪ್ಸ್ ಹಿಯರ್ " ಎಂದು ಕೂಗುತ್ತಿದ್ದರು. ಕಾಲೇಜ್ ನಲ್ಲಿ ನಡೆಯುತ್ತಿರುವ ಎಲೆಕ್ಷನ್ ಗೊಸ್ಕರ ಈ ಪ್ರಚಾರ ಎಂದು ತಿಳಿದು ಬಂತು. ಎಲೆಕ್ಷನ್ ಗೆ ನಿಂತಿರುವ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಾರ್ಡನ್ ರಾಧಮ್ಮನ ಒಪ್ಪಿಗೆ ಪಡೆದು ಹಾಸ್ಟೆಲ್ ನ ಒಳಗೆ ಬಂದರು. ಎಲೆಕ್ಷನ್ಗೆ ನಿಂತಿರುವ ಸದಸ್ಯ ರೊಹಿತ್ ಗುಪ್ತ, ಹುಡುಗಿಯರ ಮುಂದೆ ನಿಂತು ತನ್ನ ಪರಿಚಯ ಮಾಡಿಕೊಂಡನು ವಿದ್ಯಾರ್ಥಿ ಸಮಿತಿಯ ಅಧ್ಯಕ್ಷನಾಗಲು ಇಚ್ಚಿಸುವೆ ಎಲೆಕ್ಷನ್ ಸದಸ್ಯ ನಾನು ನನ್ನ ಹೆಸರು ರೊಹಿತ್ ಗುಪ್ತ ಮತ್ತು ನನ್ನ ಗುರುತು "ದಿ ಬಕ್ಸ ಸ್ಟಾಪ್ಸ್ ಹಿಯರ್" ದಯವಿಟ್ಟು ನಮ್ಮ ಪಕ್ಷಕ್ಕೆ ಮತ ನೀಡಿ. ಹಿಂದೆಯಿಂದ ಯಾರೋ ಕೆಳುತಿದ್ದರು ಹುಡುಗಿಯರ ಗುಂಪಿನಿಂದ ಅವಳ ಹೆಸರು ಕೃತಿಕಾ ಸ್ವಲ್ಪ ತುಂಟಿ ನಿಮ್ಮ ಪಕ್ಷದ ಅರ್ಥ ಏನು ರೊಹಿತ್ ಮುಗುಳ್ನಕ್ಕ ಹೆಳುವೆ "ದಿ ಬಕ್ಸ ಸ್ಟಾಪ್ಸ್ ಹಿಯರ್" ಅಂದರೆ ಜವಾಬ್ದಾರಿಯನ್ನು ತೆಗೆದುಕೊಳ್ಳವುದಲ್ಲದೆ ಕೆಲಸವನ್ನು ಮಾಡುತ್ತೆವೆ. ವಾಹ್!! ಎಂದ ಹುಡುಗಿಯರ ಗುಂಪು ಮತ್ತೊಂದು ಕಡೆ ಪ್ರಚಾರಕ್ಕೆ ಬಂದ ಹುಡುಗರು ಹಾಸ್ಟೆಲ್ ಹುಡುಗಿಯರ ಜೊತೆ ಪರಿಚಯ ಮಾಡಿಕೊಂಡು ಮಾತಿನಲ್ಲಿ ಮುಳುಗಿದ್ದರು. ಇನ್ನು ಕೆಲ ಹುಡುಗರು ಆಗಲೆ ಪ್ರಚಾರದ ಘೋಷಣೆ ಮಾಡತೊಡಗಿದರು ನಿಮ್ಮ ಅಮೂಲ್ಯ ಮತ ನೀಡಿ ಯಾರು ಮುಂಬರುವ ದಿನಗಳಲ್ಲಿ ಉತ್ತಮ ಕೆಲಸ ಮಾಡುತ್ತಾರೆ "ದಿ ಬಕ್ಸ ಸ್ಟಾಪ್ಸ್ ಹಿಯರ್" ಒಂದು ಒಳ್ಳೆಯ ಪಕ್ಷ ಮತ ನೀಡಿ ಸಹಕರಿಸಿ ಎಂದು ಕೂಗಿದರು ಹಾಗೆಯೆ ಪ್ರಚಾರ ಮಾಡುತ್ತಾ ಹಾಸ್ಟೆಲ್ ನಿಂದ ಹೊರಗೆ ಹೊದರು. ಸಂಜೆ 6.30 ಎಲ್ಲಾ ಹುಡುಗಿಯರು ತಮ್ಮ ಕೊಣೆಗೆ ತೆರಳಿದರು ವಾರ್ಡನ್ ರಾಧಮ್ಮ ಗೆಟನ್ನು ಮುಚ್ಚಿ ಅಡುಗೆ ಮಾಡುವವರು ಬರುವ ಸಮಯ ಆಯ್ತು ಇವತ್ತು ನಾನು ಸ್ವಲ್ಪ ಬೇಗ ಮನೆಗೆ ಹೊರಡಬೇಕು ಅಡುಗೆ ಮಾಡುವ ಸುಬ್ಬಮ್ಮ ಬಂದಮೇಲೆ ರಾತ್ರಿ ಮನೆಗೆ ಸ್ವಲ್ಪ ತಡವಾಗಿ ಹೊಗಲು ಹೆಳುತ್ತೆನೆ ಅಂದು ಕೊಂಡಳು. ಸ್ಮಿತಾ ಇಂಜಿನಿಯರಿಂಗ್ ವಿದ್ಯಾರ್ಥಿನಿ ಇನ್ನು ಅವಳ ತಲೆಯಲ್ಲಿ ಎಲೆಕ್ಷನ್ ಬಗ್ಗೆ ಕೊರೆಯುತ್ತಿತ್ತು ತನ್ನ ಗೆಳತಿಯರಿಗೆ ಪ್ರಶ್ನೆಗಳನ್ನ ಹಾಕ ತೊಡಗಿದಳು ಇವರು ಪ್ರಚಾರದಲ್ಲಿ ಎಲ್ಲಾ ಭರವಸೆ ಕೊಡುತ್ತಾರೆ ಅಧ್ಯಕ್ಷ ಆದ್ಮೇಲೆ ಕಾಣೆ ಆಗ್ತಾರೆ ಹಾಗಾದರೆ ನಿಜವಾಗ್ಲೂ ಇವರು ಕೆಲಸ ಮಾಡ್ತಾರಾ? ಮಾರ್ಗ್ರೆಟ್ ಕ್ರಿಶ್ಚಿಯನ್ ಇಂಜಿನಿಯರಿಂಗ್ 3ನೆ ವರ್ಷದ ವಿದ್ಯಾರ್ಥಿನಿ ಇರಬಹುದು ಆದರೆ ಅಧ್ಯಕ್ಷ ಆದ ಹೊಸತನದಲ್ಲಿ ಎರಡು ದಿನ ಮಾಡ್ತಾರೆ ಆಮೇಲೆ ಸಿಬ್ಬಂದಗಳಿಗೂ ಸಿಗಲ್ಲ ವಿದ್ಯಾರ್ಥಿಗಳಿಗೂ ನೊಡಲ್ಲ ಪ್ರತಿ ವರ್ಷ ಇದೆ ಆಗ್ತಿದೆ. ಆದರೆ ಈ ಭಾರಿ ಘೋಷಣೆ ಜಾಸ್ತಿ ನಡೆದಿದೆ ಹುಡುಗರ ಹಾಸ್ಟೆಲ್ ನಲ್ಲು ಪ್ರಚಾರ ಮೊದಲೆ ಶುರುವಾಗಿದೆ ನನ್ನ ತಮ್ಮನಿಂದ ಕೆಳಲ್ಪಟ್ಟೆ ಬರಿ ಪ್ರಚಾರ ಅಷ್ಟೆ ಅಲ್ಲ ಗೆದ್ದ ನಂತರ ಹೊಸ ಚಟುವಟಿಕೆಗಳಿಗೆ ಒತ್ತು ಕೊಡುವುದಾಗಿ ತಂತ್ರಜ್ಞಾನ,ಕಲೆ ಮತ್ತು ಕ್ರೀಡೆಗಳಿಗೆ ಅದಲ್ಲದೆ ವಿದ್ಯಾರ್ಥಿಗಳ ಯಾವುದೇ ಕ್ಷೇತ್ರದಲ್ಲಿ ಆಸಕ್ತಿ ,ಜ್ಞಾನವುಳ್ಳವರನ್ನು ಬೆಂಬಲಿಸಿ ಅವರ ಗುರಿ ತಲುಪಿಸಲು ಸಹಾಯ ಮಾಡುವುದರ ಬಗ್ಗೆ ಚರ್ಚೆ ನಡೆಯುತ್ತಿದೆಯಂತೆ. ಸ್ಮಿತಾ ಓಹ್! ಭೆಷ್ ಹಾಗಾದರೆ ಒಳ್ಳೆಯ ನಾಯಕತ್ವದ ಲಕ್ಷಣಗಳು ಕಾಣುತ್ತಿವೆ. ಬನ್ನಿ ಸಿಸ್ಟರ್ಸ ಊಟ ರೆಡಿ ಆಗಿದೆ ಹಿಂದೆಯಿಂದ ಜೂನಿಯರ್ ರೇವತಿ ಕೂಗಿದಳು.ಎಲ್ಲಾ ಹುಡುಗಿಯರು ಒಬ್ಬರಾಗಿ ಊಟದ ಕೊಣೆಗೆ ಹೊಗತೊಡಗಿದರು. ಮಾರ್ಗ್ರೆಟ್ ಊಟಕ್ಕೆ ಹೊರಡುವಾಗ ಸಂಜೆಯಿಂದ ಅವಳ ರೂಮ್ ಮೇಟ್ ಶಾಲಿನಿ ಸಭಾಂಗಣದಲ್ಲಿ ಓಡಾಡುತಿದ್ದುದನ್ನು ಗಮನಿಸಿ ಅವಳ ಹತ್ತಿರ ಹೋಗಿ ಕೇಳಿದಳು. ಶಾಲಿನಿಯು ತನ್ನ ತಂದೆಗೆ ತುಂಬಾ ಹುಷಾರಿಲ್ಲ ಆಸ್ಪತ್ರೆಗೆ ಅಡ್ಮಿಟ್ ಮಾಡಿದರ ಬಗ್ಗೆ ಹೆಳಿದಳು. ಅದಕ್ಕೆ ಮಾರ್ಗ್ರೆಟ ಚಿಂತೆ ಮಾಡಬೆಡ ಏನು ಆಗುವುದಿಲ್ಲ ಅಂತ ಸಮಜಾಯಿಸಿ ಊಟಕ್ಕೆ ಕರೆದುಕೊಂಡು ಹೊದಳು. ಊಟದ ಕೊಣೆಯಲ್ಲಿ ತುಂಟಿ ಕೃತಿಕಾ ನಕಲಿ ಹಲ್ಲಿಯನ್ನು ಸ್ಮಿತಾ ಪಕ್ಕದಲ್ಲಿ ಇಟ್ಟು ದೂರದಲ್ಲಿ ಕೂತು ಮುಸು ನಗುತಿದ್ದಳು. ಸ್ಮಿತಾ ಹಲ್ಲಿಯನ್ನು ಕಂಡು ಎದ್ದು ನಿಂತು ಜೋರಾಗಿ ಕಿರುಚಿದಳು ಅವಳ ಜೊತೆ ಅಕ್ಕ ಪಕ್ಕ ಹುಡುಗಿಯರು ಎದ್ದು ನಿಂತರು. ಕೃತಿಕಾ ಜೋರಾಗಿ ನಕ್ಕಳು ಅದು ನಕಲಿ ಹಲ್ಲಿ ಸುಮ್ನೆ ಸ್ಮಿತಾಗೆ ಭೆದರಿಸಲು ಇಟ್ಟಿದ್ದೆ ಅಷ್ಟೇ ಸ್ಮಿತಾಗೆ ಕೋಪ ಬಂದಿತ್ತು ನಿನ್ ತುಂಟತನ ಜಾಸ್ತಿಯಾಗಿದೆ ವಾರ್ಡ್ ಮ್ಯಾಮ್ಗೆ ಹೆಳ್ತಿನಿ ಅಂತ ಬೈದಳು. ಹೌದು ನಾನು ಹೆಳುವೆ ಮಾರ್ಗ್ರೆಟ್ ಎಲ್ಲರಿಗೂ ತೊಂದರೆ ಕೊಡುತಿದ್ದಾಳೆಂದು. ಕೃತಿಕಾ ಕ್ಷಮಿಸಿ ತಮಾಷೆ ಮಾಡಿದ್ದು ಅಷ್ಟೆ ಎಲ್ಲಾ ಸುಮ್ಮನಾದರೂ ಊಟ ಪ್ರಾರಂಭಿಸಿದರು ಕೃತಿಕಾ ಪದೆ ಪದೆ ಸೊರೆಕಾಯಿ ಜಾಸ್ತಿ ಮಾಡ್ತಿದ್ದಾರಪ ಬೇರೆ ತರಕಾರಿ ಇಲ್ಲ ಮಾರುಕಟ್ಟೆಯಲ್ಲಿ ಎಂದು ಗೊಣಗುತಿದ್ದಳು. ಅದಕ್ಕೆ ಸ್ಮಿತಾ ಮಾರುಕಟ್ಟೆನಲ್ಲಿದೆ ತರಲು ಯಾರಿಲ್ವಂತೆ ನಿಂಗೆ ಹಾಸ್ಟೆಲ್ನ ಹುಡುಗಿಯರೆಲ್ಲ ಸೆರಿ ನಿನ್ನ ಅಧ್ಯಕ್ಷ ಮಾಡ್ತಿವಿ ಎಲ್ಲಾ ಉಸ್ತುವಾರಿ ನಿನೆ ಮಾಡುವಂತೆ ಎಂದು ಹಿಯ್ಯಾಳಿಸಿದಳು ಹೌದು!! ಹೌದು!! ಎಂದು ಎಲ್ಲರೂ ನಕ್ಕರು .ಕೃತಿಕಾ ಹೌದಾ ಹಾಗಾದರೆ ನನ್ ಪಕ್ಷದ ಹೆಸರು "ದಿ ಬಕ್ಸ ಸ್ಟಾಪ್ಸ್ ಹಿಯರ್" ನನ್ ಎದುರುಗಡೆಯಾಗಿ ನಿನೊಂದು ಪಕ್ಷದ ಹೆಸರು ರೆಡಿ ಮಾಡು ಮತ್ತೆ ಮುಸುನಕ್ಕಳು. ಸ್ಮಿತಾ ರೆಡಿ ಮಾಡ್ತಿನಿ ಪಕ್ಷದ ಹೆಸರು ನಂಗಲ್ಲ ನಿಂಗೆ "ದಿ ಲಿಜಾರ್ಡ್ ಸ್ಟಾಪ್ಸ್ ಹಿಯರ್" ಎಲ್ಲರು ತಮ್ಮ ಕೊಣೆಗೆ ಹೊದರು ಆದರೆ ಶಾಲಿನಿಗೆ ಒಂದು ಕರೆ ಬಂದಿತ್ತು. ಅವಳ ತಂದೆ ತಿರಿರುವುದು ಸುದ್ದಿ ತಿಳಿದ ಅವಳಿಗೆ ನಿಂತಲ್ಲಿಯೆ ಕುಸಿದಂತಾಯ್ತು ಅಳುತ್ತಲೆ ಲಗೇಜ್ ಸಿದ್ಧಪಡಿಸಿದಳು. ರೂಮೆಟ್ಸ್ ಎಲ್ಲಾ ಸಮಾಧಾನಪಡಿಸಲು ಪ್ರಯತ್ನಿಸುತಿದ್ದರು. ಅವಳಿಗೆ ಊರಿಗೆ ಹೊಗಲು ಕಾರಿನ ವ್ಯವಸ್ಥೆ ಮಾಡಿದರು. ವಾರ್ಡ್ ಆಂಟಿಗೆ ವಿಷಯ ತಿಳಿಸಿ ಶಾಲಿನಿ ಊರಿಗೆ ಹೊರಟಳು. ರಾತ್ರಿ11 ಗಂಟೆ ಆಗಿತ್ತು ಎಲ್ಲಾ ಹುಡುಗಿಯರು ಮಲಗಿಕೊಂಡರು. ಮುಂಜಾನೆ ಆಯ್ತು ಕಾಲೆಜಿಗೆ ತೆರಳಲು ಹುಡುಗಿಯರು ಸಿದ್ದರಾಗುತಿದ್ದರು
