ಗಡಿಯಾರ
ಗಡಿಯಾರ
ಆಶಾ ಮಕ್ಕಳನ್ನ ಸ್ಕೂಲ್ಗೆ ಕಳಿಸೋದಕ್ಕೆ ತಾರಾತುರಿಯಲ್ಲಿ ಅಡುಗೆಗೆ ಸಿದ್ಧಪಡಿಸುತ್ತಿದ್ದಳು. ಹೊರಗಿನಿಂದ ದೊಪ್ ಎಂಬ ಶಬ್ಧ ಕೇಳಿಸಿತು. ಹೊರಗೆ ಹೋಗಿ ನೋಡಿದರೆ ಅವಳ ಪ್ರೀತಿಯ ಗಡಿಯಾರ ಬಿದ್ದು ನುಚ್ಚುನೂರಾಗಿತ್ತು. ಮಕ್ಕಳಿಗೆ ಊಟದ ಡಬ್ಬಿ ಕಟ್ಟಿ ಅವರನ್ನು ಕಳಿಸಿ, ಆ ಗಡಿಯಾರವನ್ನು ನೋಡುತ್ತಾ ಕಣ್ಣಿನಿಂದ ನೆನಪುಗಳ ಕಣ್ಣೀರು ಜಾರುತ್ತಿತ್ತು.
ಅವಳ ಮದುವೆಯಾಗಿ 10ವರ್ಷವಾಗಿತ್ತು. ಆ ಗಡಿಯಾರವನ್ನು ಅವಳ ನೆಚ್ಚಿನ ಸ್ನೇಹಿತೆ ಕೊಟ್ಟಿದಳು.
ಅದು ತಾಸಿಗೊಮ್ಮೆ ಬೆಲ್ ಹೊಡಿಯುತ್ತಿತ್ತು ಅದು ಹೊಡೆದಾಗೆಲ್ಲಾ ಅವಳ ಸ್ನೇಹಿತೆ, ನೇತ್ರಾ ನನಪಾಗುತ್ತಿದ್ದಳು.
ಕಾರ್ ಆಕ್ಸಿಡೆಂಟನಲ್ಲಿ ನೇತ್ರಾ ದೇವರ ಪಾದ ಸೇರಿದ್ದಳು.
ಅವಳ ನೆನಪಿಗಾಗಿ ಉಳಿದ ಈ ಗಡಿಯಾರ ಈ ದಿನ ಚೂರಾಗಿ ಬಿದ್ದಿರುವುದನ್ನು ನೋಡಿ ಅವಳ ಮನಸ್ಸು ಒಡೆದು ಚೂರು ಚೂರಾಗಿತ್ತು. 10 ವರ್ಷ ಚನ್ನಾಗಿ ಕಾಪಾಡಿಕೊಂಡ ಗಡಿಯಾರವದು. ಅದು ಚೂರಾಗಿರಬಹುದು ಆದ್ರೆ ಅವಳ ನೆನಪು ಮಾತ್ರ ಇನ್ನೂ ಹಸಿರಾಗಿಯೇ ಇದೆ.
ಪಟ ಪಟನೆ ಮಾತಾಡುವ ಅವಳ ಮಾತುಗಳು ಇನ್ನೂ ಹಚ್ಚೇ ಹಾಕಿದ ಹಾಗೆಯೇ ಇದೆ ಅಷ್ಟು ಸಾಕು.......ಎನ್ನುತ್ತಾ
ನಿಟ್ಟುಸಿರು ಬಿಟ್ಟಳು.
