kaveri p u

Classics Inspirational Others

4  

kaveri p u

Classics Inspirational Others

ಅಂತ್ಯವಲ್ಲಾ ಇದು ಆರಂಭ

ಅಂತ್ಯವಲ್ಲಾ ಇದು ಆರಂಭ

2 mins
508


ಒಂದು ಫ್ಯಾಕ್ಟರಿಯ ನೋಡುತ್ತಿದ್ದಂತೆ ಸುಟ್ಟು ಹೊಗೆ ಎಲ್ಲೂ ಆಕಾಶ ಕಾಣದಂತೆ ತೇಲಾಡುತಿತ್ತು. ಬೆಳಗಾಗುವುದರಲ್ಲಿ ಕರಕಲಾದ ಗೋಡೆ, ಗಾಳಿಗೆ ತೇಲಾಡುತಿದ್ದ ಹಾಳೆಗಳು. ತನ್ನ ಅಂಗಡಿಗೆ ತಾನೇ  ಬೆಂಕಿ ಇಟ್ಟು ಅಳುತ್ತಿದ್ದ ಆ ಯುವಕ. ಜೀವನವೇ ಸಾಕು ನಾನು ನಂಬಿದ ದೇವರು ನನ್ನ ಕಾಪಾಡಲು ಬರಲಿಲ್ಲಾ ಇನ್ನೂ ನಾ ಇದ್ದು ಮಾಡುವುದಾದರೆ ಏನು ಎನ್ನುತ್ತ ಅಳುತ್ತಿದ್ದ ಆ ಫ್ಯಾಕ್ಟರಿಯ ಓನರ್. ದೇವರಿಗೆ ಹಿಡಿ ಶಾಪ ಹಾಕುತ್ತಾ, ಇವತ್ತು ನಾನು ಹೊಳೆಗೆ ಬಿದ್ದು ಸಾಯಲೇ ಬೇಕು ಎನ್ನುತ್ತಾ ಆತುರದಿಂದ ಒಂದು ಹೊಳೆಯ ಕಡೆ ನಡೆಯುತ ಅವಸರದಿಂದ ಸಾಗಿದನು.


ಅಲ್ಲೊಬ್ಬಳು ಅವನಿಗಿಂತ ಮೊದಲು ಆ ನದಿಯ ದಡದಲ್ಲಿ ನಿಂತು ಒಬ್ಬಳೇ ಜೋರಾಗಿ ಕಿರಚಾಡುತ್ತಾ ನಿಂತಿದ್ದಳು. ಅದೆಷ್ಟು ಕಷ್ಟಗಳನ್ನು ಸಹಿಸಿಕೊಂಡು ಮಲತಾಯಿಯ ಜೊತೆ ಬೆಳೆದೆ ಹಾಗೂ ಹೀಗೂ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿ ಡೀಗ್ರೀ ಮುಗಿಸಿದೆ. ನಾನು ಇಷ್ಟೆಲ್ಲಾ ಮಾಡಿ ಪಸ್ಟ್ 

ಕ್ಲಾಸ್ಸನಲ್ಲಿ ಪಾಸ್ ಅದೇ ಆದರೂ ಕೆಲಸ ಸಿಗುತಿಲ್ಲಾ.ಎಲ್ಲವನ್ನು ಹೇಳಿಕೊಳ್ಳಲು ನನ್ನ ಅಪ್ಪನು ಇಲ್ಲಾ. ಇರುವ ತಾಯಿಗೆ ಹೇಳಿದ್ರು ನನ್ನ ಕಷ್ಟ ಅರ್ಥವಾಗಲ್ಲಾ. ನನಗೆ ಸಾವೇ ಗತಿ ದಿನ ಪೂರ್ತಿ ಹೀಗೆ ಚಿಂತೆ ಮಾಡುವುದಕ್ಕಿಂತ ಒಂದು ಸರಿ ಸಾಯುವುದೇ ಒಳ್ಳೆಯದು ಅಂತ ಅನಿಸಿತು ಅದಕ್ಕೆ ಈ ನಿರ್ಧಾರ ಮಾಡಿರುವೆ. ಈಗ ಇಲ್ಲಿ ಬಿದ್ದು ಸತ್ತರೆ ಯಾರು ನೋಡುವುದಿಲ್ಲಾ ಬಿದ್ದು ಬಿಡೋಣ ಅಂತಾ ಹಾರಲು ಸಿದ್ಧಳಾದಳು .ಅಷ್ಟರಲ್ಲಿಯೇ ಮೂಕನಂತೆ ಆಕೆಯ ಮಾತುಗಳನ್ನ ಆಲಿಸುತ್ತಾ ನಿಂತವನು ಅವಳನ್ನು ಎಳೆದು ಹಿಂದೆ ಸರಿದು ಒಂದು ಕಪಾಳಕ್ಕೆ ಹೊಡೆದು ತಡೆದ.


ಇಬ್ಬರು ಸಾಯಲು ಬಂದವರು. ಆದ್ರೆ ಅವನಿಗೆ ಒಬ್ಬ ಹೆಣ್ಣು ಮಗಳು ಸತ್ತರೆ, ಹೆಣ್ಣು ಮಗು ಅಂತ ಹೇಳ್ತಾರೆ.ಆದ್ರೆ ಗಂಡು ಮಗನಾದ, ನಾನು ಸತ್ತರೆ ಸಮಾಜ ಹೇಗೆ ತೆಗೆದುಕೊಳ್ಳುತ್ತದ್ದೆ ಅಂತ ನಾಚಿಕೆ ಅನಿಸಿತು. ಅವಳಿಗೆ ಅವನ ಕಥೆಯನ್ನ ಹೇಳ ಹತ್ತಿದನು. ನಾನು ಒಬ್ಬನೇ ಮಗ ಓದು ಮುಗಿಸಿ ಕೆಲಸಕ್ಕಾಗಿ ತುಂಬಾ ಕಡೆ ಅಲೆದೆ ಎಲ್ಲಿಯೂ ಕೆಲಸ ಸಿಗಲಿಲ್ಲಾ. ಸಣ್ಣದೊಂದು ಬಿಸ್ಕಿಟ್ ಫ್ಯಾಕ್ಟರಿ ಇಟ್ಟುಕೊಂಡಿದ್ದೆ ಅದಕ್ಕೆ ನನ್ನ ತಾಯಿಯ ಬಂಗಾರವನ್ನು ಅಡಾ ಇಟ್ಟು ಆ ಹಣದಿಂದ ಬಿಸ್ಕಿಟ್ ಫ್ಯಾಕ್ಟರಿ ಇಟ್ಟುಕೊಂಡು ನಾನೇ ಮಾಡುವುದು, ನಾನೇ ಹೊರಗಡೆ ಅದನ್ನ ಮಾರುವುದು ಸಂತೆಗೆ ಚಿಕ್ಕ ಚಿಕ್ಕ ಪ್ಯಾಕ್ ಮಾಡಿ ಮಾರಿದೆ ಅದರ ಲಾಭ ಚನ್ನಾಗಿದೆ ಅಂತಾ ಇಬ್ಬರನ್ನು ಕೆಲಸಕ್ಕೆ ಇಟ್ಟು ಕೊಂಡೆ. ಅವರಿಗೆ ಹೇಳಿದ್ದೆ ನಾವು ಇನ್ನೂ ಇದರಲ್ಲಿ ಹೆಸರು ಮಾಡಿ ನಮ್ಮದೇ ಆದ ಬಿಸ್ಕಿಟ್ ಕಂಪನಿಯೊಂದನ್ನು ತೆರೆಯೆಬೇಕು ಹಗಲಿರಳು ಅಂತ ನೋಡದೆ ಅದಕ್ಕಾಗಿ ಶ್ರಮಸಿದೆ. ಅವರು ಕೂಡ ಅದಕ್ಕೆ ತಮ್ಮ ಪರಿಶ್ರಮ ನೀಡಿದರು. 


ಬಿಸ್ಕಿಟ್ ಮೇಲೆ ಅವರ ತಾಯಿಯ ಹೆಸರು ಇಡಲು ಇಚ್ಛಿಸಿದ. ಅದೆಲ್ಲಾ ಆಗಬೇಕಾದರೆ ಅವನು ಮತ್ತೊಂದು ಮಷಿನ್ ತೆಗೆದುಕೊಳ್ಳಬೇಕಿತ್ತು. ಆ ಮಷಿನ್ಗೆ ಹಣ ಕಟ್ಟಲು ಸಾಧ್ಯವಾಗಲಿಲ್ಲ ಇರುವ ಇಬ್ಬರಿಗೆ ತಿಂಗಳ ಸಂಬಳ ನೀಡಿ ಮನೆ ನಡೆಸಿಕೊಂಡು ಹೋಗುವುದೇ ಕಷ್ಟವಾಯಿತು.

ಕೆಲಸಗಾರರು ಕಾರಣ ನೀಡಿ ಅಲ್ಲಿಂದ ಕೆಲಸ ಬಿಟ್ಟು ಹೊರಟರು. ಅವರ ತಾಯಿಗೆ ಮುಖ ತೋರಿಸಲು ಆಗದೆ ಅವನು ಅಂಗಡಿಗೆ ಬೆಂಕಿ ಇಟ್ಟು ಸಾಯಲು ನಿರ್ಧರಿಸಿ ಬಂದಿದ್ದೆ ಅಂತ ಅವಳ ಮುಂದೆ ಹೇಳಿ ತನ್ನ ಅಳಲು ತೋಡಿಕೊಂಡನು.


ಅವರಲ್ಲಿ ಗೆಳೆತನ ಹುಟ್ಟಿತು. ಸತ್ತರೆ ನಿಮ್ಮ ಅಮ್ಮನನ್ನು ನೋಡಿಕೊಳ್ಳುವರು ಯಾರು? ನನಗೆ ಅಮ್ಮ ಇದಿದ್ದರೆ ನಾನು ಹೀಗೆ ಸಾಯುವ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ.


ಹೀಗೆ ಅವರು ಇವಳಿಗೆ, ಇವಳಿಗೆ ಅವರು ಸಮಾಧಾನ ಮಾಡಿದರು. ಅವರ ಪರಿಚಯ ಇಲ್ಲಿಂದ ಶುರುವಾಯಿತು.

ಅವನು ಆಕಾಶ ಅವಳು ಅನನ್ಯಾ.

ಆಕಾಶ ಅವರ ಮನೆಗೆ ಹೋದರು. ನಡೆದ ಎಲ್ಲಾ ಸಂಗತಿಯನ್ನು ಅನನ್ಯಾ ಅವರ ಅಮ್ಮನ ಹತ್ತಿರ ಹೇಳಿದಳು.ಅವರು ಇಬ್ಬರು ಒಳ್ಳೆಯ ಸ್ನೇಹಿತರಾಗಿ. ಒಂದು ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಮಾನ್ ಆಗಿ ಕೆಲಸ ಶುರು ಮಾಡಿದರು. 5 ವರ್ಷಗಳ ನಂತರ ಅವರ ಹತ್ತಿರ ಒಂದಷ್ಟು ಹಣ ಒಟ್ಟುಗೂಡಿತು. ಸುಟ್ಟು ಕರಕಲಾದ ಆ ಜಾಗದಲ್ಲಿ ಅವರು ಬೇರೊಂದು ಬಟ್ಟೆಯ ಅಂಗಡಿ ತೆಗೆದರು. ಅವರ ಲಕ್ ಬದಲಾಯಿತು. ಕಠಿಣ ಪರಿಶ್ರಮದಿಂದ ಏನಾದರೂ ಪಡೆಯಬಹುದು ಎನ್ನುವುದು ಮನವರಿಕೆಯಾಯಿತು. ಆತುರ ಬಿದ್ದು ಜೀವ ತೆಗೆದುಕೊಳ್ಳುವ ಕೆಲಸ ಯುವಕರಿಂದ ಆಗಬಾರದು.


ಆಕಾಶ ಅವಳಿಗೆ ಪ್ರಪೊಸ್ ಮಾಡಿದ. ಅನನ್ಯಾ ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲಾ ಕಾರಣ ನನ್ನ ಚಿಕ್ಕಮ್ಮ ನನ್ನ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಇದುವರೆಗೂ ನಾನು ಅವರಿಗೆ ನನ್ನ ಆಪ್ತ ಸ್ನೇಹಿತ ಅಂತಲೇ ಹೇಳಿರುವೆ ಅದನ್ನೇ ಮುಂದುವರೆಸೋಣ. ಈ ಪ್ರೀತಿ ಪ್ರೇಮ ಮದುವೆ ಬೇಡಾ. ಹೀಗೆ ಆಕಾಶ ಅನನ್ಯಾ ಸ್ನೇಹ ಸಂಬಂಧ ಸುಖವಾಗಿ ಇರಲಿ.   ಅನನ್ಯಾಳ ಮಾತಿಗೆ ಆಕಾಶ್ ಮೆಚ್ಚಿ ಸ್ನೇಹಿತನಾಗಿರಲು ಒಪ್ಪಿದ.


   



Rate this content
Log in

Similar kannada story from Classics