STORYMIRROR

Gireesh pm Giree

Romance Others Children

1  

Gireesh pm Giree

Romance Others Children

ವರ್ಷದಾರೆ

ವರ್ಷದಾರೆ

1 min
142

ವರ್ಷದಾರೆ ಧರೆಗೆ ಬಂದಳು

ವರ್ಷಧಾರೆಯ ಧರೆಗೆ ತಂದಳು

ನಿನ್ನಿಂದ ಸಮೃದ್ಧಿ ಇಳೆ ಮಡಿಲು

ನಿನ್ನಿಂದ ಸಮೃದ್ಧಿ ಇಳೆ ಒಡಲು


ತಂಪೆರೆಯುವ ತಂಗಾಳಿಗೆ ಮನ ಜಾರಿತು

ಬಾಡಿದ ಗಿಡ ಮರ ಬಳ್ಳಿ ನಗು ಬೀರಿತು

ಎಲ್ಲೆಲ್ಲೂ ಹೂವಿನ ಸುವಾಸನೆ ಹರಡಿತು

ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸಿತು


ಮುಂಗಾರಿನ ರಭಸಕ್ಕೆ ಕೊಡೆ ಅರಳಿ ಹೂವಾಯಿತು

ಮಾರ್ಗದಲ್ಲಿ ನನ್ನ ಕೊಡೆ ಹೀಗಾಯಿತು 

ಮೈಯೆಲ್ಲಾ ಒದ್ದೆಯಾಗಿ ಸಾಕಾಯಿತು

ಇದರಿಂದ ಆ ದಿನ ಸುಸ್ತಾಯಿತು


ಮಳೆಯಲ್ಲಿ ನೆನೆದ ಬಾಲ್ಯದ ದಿನಗಳು

ಹರಿವ ನೀರಲ್ಲಿ ಬಿಟ್ಟ ದೋಣಿಯ ಸಾಲುಗಳು

ಬಾಲ್ಯದ ದಿನವನ್ನು ನೆನಪಿಸಿದ ಈ ಮಳೆ

ನನ್ನ ಮನದಲ್ಲಿ ಹರಿಸಿತು ನೆನಪಿನ ಹೊಳೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance