ವಿಶ್ವ ಮಾನಸಿಕ ದಿನ
ವಿಶ್ವ ಮಾನಸಿಕ ದಿನ
ಮಾನವನಾಗಿ ಅವತರಿಸಿದ ಮೇಲೆ ಒತ್ತಡ ಸಹಜ
ಈ ಒತ್ತಡವ ಎದುರಿಸಲು ಪರಿಹರಿಸಲು ನಿನಗೆ ಸಾಧ್ಯ ಮನುಜ
ಮಾನಸಿಕ ಸ್ಥಿರತೆ ಕಳೆದುಕೊಳ್ಳಬೇಡ
ಆತ್ಮಬಲ ಜೀವನದಲ್ಲಿ ರೂಢಿಸಿ ಒಮ್ಮೆ ನೋಡ
ಅತಿಯಾದ ಚಿಂತೆ ನಿರ್ಲಕ್ಷ ಬೇಡ ಗೆಳೆಯ
ಕುಟುಂಬದೊಂದಿಗೆ ಕಳೆ ನೀನು ಸ್ವಲ್ಪ ಸಮಯ
ಏಕಾಂಗಿ ಜೀವನಕ್ಕೆ ಹೇಳು ವಿದಾಯ
ನಿನ್ನ ಮನದ ಮಾತನ್ನು ಹಂಚಿಕೋ ಗೆಳೆಯ
ಪ್ರತಿಯೊಂದು ಮಾತಿಗೂ ಎದುರು ಮಾತಾಡದಿರು
ಮನಸಿನೊಳಗೆ ಹೆಚ್ಚಾಗಿ ವ್ಯಥೆ ಪಡದಿರು
ಸಿಟ್ಟು ಕೋಪವ ಮೂಗಿನ ತುದಿಯಿಂದ ಓಡಿಸು
ನಗುನಗುತ್ತಾ ಜೀವನದುದ್ದಕ್ಕೂ ಜೀವಿಸು ಅಮೂಲ್ಯ ಪ್ರಾಣವ ಪ್ರೀತಿಸು
