ತಂಗಾಳಿ
ತಂಗಾಳಿ
ತಂಗಾಳಿಯು ನೀಡುತಿದೆ ಮಳೆಯ ಸೂಚನೆ
ಮನದ ಕಡಲ ಒಡಲಲಿ ನಿನ್ನದೇ ಯೋಚನೆ
ಗಾಳಿಯು ಹರಿದೆಲ್ಲೆಡೆ ತರುವುದು ತಂಪು
ನೀ ಸುಳಿದೆಲ್ಲೆಡೆ ಒಲವಿನದೇ ಕಂಪು
ಮೊದಲ ಮಳೆಗೆ ಹದಗೊಂಡ ಮಣ್ಣಿನ ಆಹ್ಲಾದ
ನಿನ್ನ ನೆನಪಲ್ಲೇ ಮೀಯುವುದೇ ಮೈ ಮನಕೆ ಮುದ
ವರ್ಷಧಾರೆಗೆ ಮಿಂದು ಹಸಿರಾದ ಇಳೆ
ನೀ ಜೊತೆಗಿದ್ದರೆ ಮಾತ್ರ ಈ ಜೀವಕೆ ಕಳೆ
ತಂಗಾಳಿಯು ತಂಪೆರೆಯುವುದು ಮರೆಸುತ ಬಿಸಿಲಿನ ಧಗೆ
ನಿನ್ನ ಪ್ರೀತಿಯು ಮರೆಸಿಹುದು ಈ ವಿರಹದ ಬೇಗೆ
ಪ್ರೀತಿಯಿರದ ಜೀವನ ಬೇಸಿಗೆಯ ಬಿಸಿಲಿನಂತೆ ಬರಡು
ನಿನ್ನ ಒಲವಿನ ನೆನಪಿನಿಂದಲೇ ಕೊನರುವುದು ಜೀವದ ಕೊರಡು

