ಸಂಗಮ
ಸಂಗಮ
ಜೀವನವೊಂದು ಮಧುರ ಸಂಗಮ
ಸೋಲು ಗೆಲುವಿನ ಸಮಾಗಮ
ಕಷ್ಟ ಸುಖಗಳ ಸಿಂಚನ
ಸುಖ ದುಃಖಗಳ ಸಮ್ಮಿಲನ
ಶೃತಿ ರಾಗ ತಾಳ ಸಂಗೀತದ ಸಂಗಮ
ಮನದ ವೀಣೆ ಮೀಟಲು ಪ್ರೀತಿಯ ಉಗಮ
ಕಾವ್ಯದ ಮೂಲಕ ಕವಿಯ ಭಾವ ಸ್ಪಂದನ
ಸದ್ವಿಚಾರದ ಬಗ್ಗೆ ಮಾಡೋಣ ಚಿಂತನ
ನದಿ ನದಿಗಳ ಸಂಗಮ
ಪ್ರಕೃತಿಯ ದೃಶ್ಯ ವಿಹಂಗಮ
ನೋಡುತ ಧನ್ಯವು ಈ ನಯನ
ಮೈ ಮನವಾಯಿತು ರೋಮಾಂಚನ
