STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ಸಂಸ್ಕೃತಿ

ಸಂಸ್ಕೃತಿ

1 min
361

ಹಲವು ರಾಜ್ಯ ಭಾಷೆ ನೆಲದಿ ಒಡಮೂಡಿದೆ  ಭಾರತ 

ಶಾಂತಿ ಪ್ರೇಮ ಭ್ರಾತೃತ್ವವ ಸಾರುತಿಹುದು ಸಂತತ 

ವಿವಿಧತೆಯಲಿ ಏಕತೆಯೇ ನಮ್ಮ ದೇಶದ ಸಂಸ್ಕೃತಿ 

ಪರದೇಶದ ವ್ಯಾಮೋಹದಿ ಆಗದಿರಲಿ ವಿಕೃತಿ 


ವೇಷ ಭಾಷೆ ಬೇರೆ ಆದರೇನು ಒಟ್ಟಿಗೆನೇ ಇರುವೆವು 

ಮನುಜರೆಲ್ಲಾ ನಾವು ಒಂದೇ ಭಾವದಲ್ಲಿ ಬೆರೆವೆವು 

ಕೋಟಿ ದೈವ ಇದ್ದರೂನು ದೈವ ಒಂದೇ ಎನುವೆವು 

ಎಲ್ಲಾ ಜಾತಿ ಪಂಥಗಳ ದೇವರಿಗೂ ನಮಿಪೆವು 


ನದಿ ತೊರೆ ಹೊಲ ವನ ಎಲ್ಲಾ ಪೂಜನೀಯವೂ 

ರಾಮ್ ರಹೀಮ್ ನಾನಕ್ ಯೇಸು ಎಲ್ಲಾ ಕೂಡ ಮಾನ್ಯವು 

ದಶದಿಕ್ಕಿಗೂ ಹರಡಿದೆ ವಿಭಿನ್ನತೆಯು ದೇಶದಿ 

ಆದರೇನು ನಾವು ಭಾರತೀಯರೆಂಬ ಹೆಮ್ಮೆ ಭಾವಾವೇಷದಿ 


Rate this content
Log in

Similar kannada poem from Classics