STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ನಂದಾದೀಪ

ನಂದಾದೀಪ

1 min
12

ಜನುಮವ ನೀಡುವ ತಾಯಿಯ ಪ್ರತಿರೂಪ

ಅವಿರತ ಸಲಹುವ ತಂದೆಯ ಬಾಳ ದೀಪ

ಅನುಜ ಅನುಜೆಯರಿಗೆ ಮಮತೆಯ ರೂಪ

ಮಗಳೇ ಮನೆಮನ ಬೆಳಗುವ ನಂದಾದೀಪ


ಜನಿಸಿದ ಮನೆಯಲಿ ದೀಪವ ಹಚ್ಚಿಸಿ

ಮೆಟ್ಟಿದ ಮನೆಯ ಮನೆತನ ಬೆಳಗಿಸಿ

ಮಕ್ಕಳ ಬಾಳಿನ ದಾರಿಯ ದೀಪ

ಸಹಿಸುವಳು ಸಂಸಾರದ ಬವಣೆ ತಾಪ 


ಪ್ರೀತಿಯ ತೈಲವ ದಿನವೂ ಸುರಿದು

ದುಡಿವಳು ಬದುಕಲಿ ಮೈಯನು ಮುರಿದು

ಬೆಳಗಿಹಳು ಮನೆಯ ಜೀವನ ಜ್ಯೋತಿ

ಕಷ್ಟಗಳ ಮೆಟ್ಟಿ ಮುನ್ನಡೆವ ಛಾತಿ


ತಾನುರಿದು ಜಗವ ಬೆಳಗುವ ರೀತಿ

ಕಷ್ಟವ ಸಹಿಸುವ  ತ್ಯಾಗದ ಮೂರ್ತಿ

ಪ್ರೀತಿ ವಾತ್ಸಲ್ಯವ ಬೀರುವ ಬೆಳಕು 

ಸಾರುವ ಮಹಿಮೆಯ ಹೇಳುತಾ ಬಹುಪರಾಕು 


Rate this content
Log in

Similar kannada poem from Classics