ಬೆಳದಿಂಗಳು
ಬೆಳದಿಂಗಳು
ಹುಣ್ಣಿಮೆ ಚಂದ್ರನು ಬೀರಿದ ಬೆಳಕ
ಭೂಮಿಗೆ ಬೆಳದಿಂಗಳಲಿ ಮೀಯುವ ತವಕ
ದೂರಕೂ ದನಿಸಿದೆ ಜಲಧಿಯ ಮೊರೆತ
ತೀರಕೂ ತಟ್ಟಿದೆ ಅಲೆಗಳ ಭರತ
ಎಲ್ಲೆಡೆ ಹರಿದಿದೆ ಗಾನದ ಹೊನಲು
ಕವಿಗಳ ಕಾವ್ಯಕೆ ನೂತನ ಮಜಲು
ಪ್ರೇಮಿಗಳ ಪಾಲಿನ ಸೌಂದರ್ಯದ ಮಹಲು
ಬೆಳದಿಂಗಳೆ ಪ್ರಕೃತಿಯ ಮನಮೋಹಕ ಘಜಲು..
