STORYMIRROR

Chethana Bhargav

Abstract Inspirational Others

4  

Chethana Bhargav

Abstract Inspirational Others

ಜಾರುಬಂಡೆ

ಜಾರುಬಂಡೆ

1 min
3


ಬದುಕೊಂದು ಜಾರುಬಂಡೆ ಆಟದಂತೆ

ಏಳು ಬೀಳು ಇದರಲ್ಲಿ ಸಹಜವಂತೆ

ಜೀವನದಿ ಗೆದ್ದು ಮೇಲೇರಿದೆ ಎಂದು ಬೀಗಬೇಡ

ಮರುಕ್ಷಣವೇ ಜಾರಿ ಕೆಳಗೆ ಬೀಳಬಹುದೆಂದು ಮರೆಯಬೇಡ


ಜಾರಿದರೂ ಕಳೆದುಕೊಳ್ಳದಿರು ನಿನ್ನಯ ನೆಮ್ಮದಿ

ಸಾಧಿಸುವ ಛಲವೇ ಗೆಲುವಿನ ಬುನಾದಿ

ದೂರುವ ಅವರಿವರ ಮಾತಿಗೆ ಎಂದೂ ಜಗ್ಗದಿರು

ಆತ್ಮ ವಿಶ್ವಾಸದಿ ಸಾಧನೆಯ ಶಿಖರವ ಏರು


ಮಕ್ಕಳ ಜಾರುಬಂಡಿ ಆಟ

ಕಲಿಸುವುದು ನಮಗೆ ಜೀವನದ ಪಾಠ

ಸೋಲಿನ ಭಯವ ಬದಿಗೊತ್ತಿ

ಧೈರ್ಯದಿ ಯಶಸ್ಸಿನ ಮೆಟ್ಟಿಲ ಹತ್ತಿ


Rate this content
Log in

Similar kannada poem from Abstract