ಹೆಮ್ಮೆಯಿಂದ ಹಾಡು ಕನ್ನಡ ನಾಡು
ಹೆಮ್ಮೆಯಿಂದ ಹಾಡು ಕನ್ನಡ ನಾಡು
ನಮ್ಮ ನಾಡು ಕರುನಾಡು
ಶ್ರೀಗಂಧದ ಬೀಡು
ಸಾಹಿತ್ಯ ಶಿಲ್ಪ ಕಲೆಗಳ ತಾಯ್ನಾಡು
ಗಂಗ ಕದಂಬರು ಆಳಿಹರು ನೋಡು
ನೋಡಲು ರಮಣೀಯ ಕರಾವಳಿಯ ಕಡಲ ತೀರ
ನಿತ್ಯಹರಿದ್ವರ್ಣ ಕಾಡಿನಿಂದ ಕೂಡಿದೆ ಮಲೆನಾಡ ಪರಿಸರ
ಉತ್ತರ ಕರ್ನಾಟಕದ ಭಾಷೆ ಸುಂದರ
ಬಯಲು ಸೀಮೆಯ ಬೆಡಗು ಮನೋಹರ
ರನ್ನ ಪಂಪ ಕುಮಾರವ್ಯಾಸರ ತವರೂರು
ವಿವಿಧ ಆಚಾರ ವಿಚಾರಗಳು ಇಲ್ಲಿವೆ ನೂರಾರು
ಹೆಮ್ಮೆಯಿಂದ ಹಾಡು ನಮ್ಮದು ಕನ್ನಡ ನಾಡು
ಎಲ್ಲೆಲ್ಲೂ ಹರಡಲಿ ನಮ್ಮ ಸಂಸ್ಕೃತಿಯ ಸೊಗಡು
