STORYMIRROR

ಶಿವಲೀಲಾ ಹುಣಸಗಿ

Inspirational

3  

ಶಿವಲೀಲಾ ಹುಣಸಗಿ

Inspirational

ಸತ್ಸಂಗದ ತೊಟ್ಟಿಲು

ಸತ್ಸಂಗದ ತೊಟ್ಟಿಲು

1 min
273

ಮಾತುಗಳಿಗಿಲ್ಲ ಮೌನದ ಸಂಧಾನ

ಹೇಳಿದಷ್ಟು ಬಂತು ಋತುಗಾನ

ಬಿದ್ದಷ್ಟು ಮಳೆ,ಬೆಳೆ,ಇನ್ನೇನಿಲ್ಲ ಕೊಳೆ

ಕೊಚ್ಚಿ ಹೋದ ಮಾತಿಗಿಲ್ಲ ಬೆಲೆ

ಸಿದಾಸಾದಾ ಪರಂಪರೆಯಲ್ಲಿ

ಮುಟ್ಟು,ಮಡಿಯ ಅಂತರದಲ್ಲಿ

ನಡೆದವನನ್ನು ಬಂಧಿಸಲಾದಿತೇ?

ಸತ್ಯದ ಅರಿವು ಬೆಳಕಾಗಿದ್ದರೂ

ಹಿರಿಯರ ಒಲವು ಜೊತೆಗಿದ್ದರೂ

ಬದಲಿಸಲಾಗದ ಕಠೋರ ಮನಸ್ಸುಗಳು

ಕೊಳೆತು ನಾರುವ ಚಿಂತನೆಗಳಲ್ಲಿ

ಕಿಚ್ಚು ಹಚ್ಚಿ ಚಳಿ ಕಾಯಿಸಿಕೊಂಡವರು

ತನ್ನದೆಲ್ಲವ ಇಂಚಿಂಚು ಮಾರಿಕೊಂಡವರು

ನೀತಿ ಮಾರ್ಗವ ಗಾಳಿಗೆ ತೂರಿನಿಂತವರು

 ವೇಷ ಧರಿಸಿ ಮೆರೆದ ಬಹುರೂಪಿಗಳು

ನ್ಯಾಯನಿಷ್ಠೆಯನು ಮೆಟ್ಟಿದ ವಂಚರು

ನೇರ ದಿಟ್ಟ ನಿರಂತರವೆಂಬ ದಿಟ್ಟತನವ

ಸುಳ್ಳಾಗಿಸಿ ಮುಖವಾಡ ಧರಿಸಿದವರು

ಹೊಸ ಸೂರ್ಯನ ನಿರೀಕ್ಷೆಯಲ್ಲಿ

ಸತ್ಸಂಗದ ತೊಟ್ಟಲ ತೂಗುವ ಬನ್ನಿ

ಇದ್ದುದನ್ನು ಇದ್ದ ಹಾಗೆ ಹೇಳೊಣ ಬಿನ್ನಿ

ಆತ್ಮಾಭಿಮಾನಕ್ಕಿಂತ ದೊಡ್ಡದಿಲ್ಲ ಎನೂ

ದೇಶದ ಬೆನ್ನೆಲುಬಾಗಿ ಬಾಳೋಣ ಬನ್ನಿ

ನಾನು ನನದೆಂಬ ಆಸೆ ಬಿಟ್ಟು ಬನ್ನಿ

ಸಂಸ್ಕಾರದ ಹೊಣೆಯ ಹೊತ್ತು ಬನ್ನಿ..

ಸಿದಾ ಮಾತಿಗೆ ಹೃದಯದ ಉಡುಗೊರೆ

ಸ್ನೇಹದ ಬದುಕ ಕಟ್ಟೋಣ ಬನ್ನಿ.



Rate this content
Log in

Similar kannada poem from Inspirational