STORYMIRROR

Gireesh pm Giree

Inspirational Others Children

2  

Gireesh pm Giree

Inspirational Others Children

ಸಂವಿಧಾನ ಜಾರಿಗೆ ಬಂದ ದಿನ

ಸಂವಿಧಾನ ಜಾರಿಗೆ ಬಂದ ದಿನ

1 min
98

ಈ ದೇಶ ಸುಂದರ ಈ ಮಣ್ಣ ಮಹಿಮೆಗೆ ನಮಸ್ಕಾರ

ಭರತ ಮಣ್ಣಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಅಪ್ರತಿಮವೀರ


ಹುಟ್ಟಿದರು ಈ ಮಣ್ಣಲ್ಲಿ ಅಪ್ರತಿಮ ಶೂರರು ಹೃದಯದವರು

ಅವರ ಕೊಡುಗೆಯ ಫಲವೇ ಇಂದು ಆಚರಿಸುವ ಈ ದಿನ

ಸಂವಿಧಾನ ಜಾರಿಗೆ ಬಂದ ದಿನ ಸುದಿನ ಅವರಿಗೆ ನಮ್ರತೆಯ ನಮನ


ಸಂಭ್ರಮವು ಮುಗಿಲ ತನಕ ಕೇಳುವುದು 

ದೇಶಭಕ್ತಿಯ ಸುಗಂಧವು ದೇಶದಲ್ಲೆಡೆ ಪಸರಿಸುವುದು ರಾಷ್ಟ್ರ

ರಾಜಧಾನಿಯಲ್ಲಿ ವರ್ಣರಂಜಿತ ಕಾರ್ಯಕ್ರಮದ ಕಮಾಲು

ಆ ಭವ್ಯ ದೃಶ್ಯಕ್ಕೆ ಕಣ್ ಮನವೆ ಸೋಲು


ಬಹುದಿನದ ಕನಸಾದ ಸಂವಿಧಾನವು ನನಸಾದ ದಿನವೆಂದು

ರಾಷ್ಟ್ರನಾಯಕರ ಶ್ರಮದ ಫಲವೇ ಸಂವಿಧಾನವು ಕಾಣುವುದು ಇಂದು

ಗಣರಾಜ್ಯೋತ್ಸವದ ಶುಭಾಶಯಗಳು ನಿಮಗೆಲ್ಲರಿಗೂ ಇಂದು

ಇದ ಗೌರವಿಸುವ ಹೊಣೆಗಾರಿಕೆ ನಮ್ಮ ಮೇಲೆ ಎಂದೆಂದೂ


Rate this content
Log in

Similar kannada poem from Inspirational