Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Abstract

3.0  

Prabhakar Tamragouri

Abstract

ಸಂಜೆ ಸೊಬಗು

ಸಂಜೆ ಸೊಬಗು

1 min
173


ಎಂದಿನಂತೆ ಕೆಂಪೆಡರಿದ

ಸೂರ್ಯನ ಕೆಂಬಣ್ಣ

ಪಸರಿಸಿದೆ ಪಶ್ಚಿಮದ

ಬಾನ ದಿಗಂತದಲ್ಲಿ.


ಇದಕ್ಕೆ ಸಾಕ್ಷಿಯೋ ಎಂಬಂತೆ

ಗೂಡು ಸೇರುವ ತವಕದಲಿ

ಚಿಲಿಪಿಲಿಗುಟ್ಟು ಹಾರುವ ಹಕ್ಕಿಗಳು ,

ಮೇಲಿಂದ ಮೇಲೆ ಧರೆಗೆ ಅಪ್ಪಳಿಸುವ

ಸಮುದ್ರ ರಾಜ !


ಕೊರೆದಷ್ಟೂ ಉದ್ಭವಿಸುವ ಉಸುಕು

ಮುಗಿಯಲಾರದ ಅಕ್ಷಯ ಪಾತ್ರೆ.....!!

ಅಲ್ಲಲ್ಲಿ ಮೊಡಿಬಂದ ಹೆಜ್ಜೆ ಗುರುತು

ಸೂರ್ಯ ಇಳಿದಂತೆ ಮೊಡಿ ಬರುವ ನೆರಳು

ದಿನಚರಿಯಲ್ಲಿ ಬರೆಯುವ ಒಂದು ಸಂಜೆ ಸೊಬಗು..!


Rate this content
Log in

Similar kannada poem from Abstract