ಸ್ನೇಹ
ಸ್ನೇಹ
ಸ್ನೇಹ ಬೇಕು ಊಟದ ರುಚಿ ಸವಿಯಲು
ಸ್ನೇಹಿತ ಬೇಕು ಜೀವನದ ಸವಿ ಹೆಚ್ಚಲು
ಸ್ನೇಹವಿರದ ಊಟ ಊಟ ವೆನಿಸದು
ಸ್ನೇಹಿತರಿರದ ಬದುಕು ಪೂರ್ಣವಾಗದು
ಸ್ನೇಹದ ಹೊತ್ತಿಗೆಯಲಿ ತುಂಬಿರಬೇಕು
ಸ್ನೇಹ, ಪ್ರೀತಿ,ವಿಶ್ವಾಸ ನಂಬಿಕೆ ಪುಟಗಳು
ಸ್ನೇಹಕ್ಕಾಗಿ ಸ್ವಾರ್ಥ ರಹಿತ ತ್ಯಾಗ ಬೇಕು
ಸ್ನೇಹಕ್ಕಾಗಿ ಪ್ರಾಣ ಒತ್ತೆ ಇಡಲು ಬೇಕು
ವಿಜಯಭಾರತೀ.ಎ.ಎಸ್.
ಸೂಚನೆ (ಸಂಸ್ಕೃತದಲ್ಲಿ ತುಪ್ಪಕ್ಕೆ ಸ್ನೇಹ ಎನ್ನುತ್ತಾರೆ)