STORYMIRROR

JAISHREE HALLUR

Inspirational Others Children

4  

JAISHREE HALLUR

Inspirational Others Children

ಸ್ನೇಹ- ಸಿಂಚನ####

ಸ್ನೇಹ- ಸಿಂಚನ####

1 min
309

ಗೆಳೆಯಾ,

ನನ್ನ ನಿನ್ನ ಸ್ನೇಹ ಹೊಳೆವ 

ಚಂದ್ರನಷ್ಟೇ ಶುಭ್ರ ನೋಡು

ಬೆಳದಿಂಗಳಿನಂಗಳದಲ್ಲಿ ನಲಿವ

ನಗುವಿನಲೆಗಳ ಅಬ್ಬರದ ಗೂಡು


ಮೃದು ಹಾಸ್ಯ ಮಂದಗತಿ ಮಾತುಗಳು

ತಿದ್ದಿ ತೀಡುವ ಅನುನಯದ ಬೈಗಳು

ಬಾಗುವವು ಭಾವಗಳು ಹುಸಿಮುನಿಸಿನೊಳು

ನೀಗಿಸಿ ಕೋಪಗಳ ಬೆರೆತ ಹರುಷಗಳು


ಈ ಪರಿಯ ಸ್ನೇಹ ಸಿಹಿ ಹೂರಣದಂತೆ

ತೀಡಿ ನಾದಿದ ಕಣಕಕೆ ತುಂಬಿದ ಹೋಳಿಗೆಯಂತೆ

ಉಂಡಷ್ಟೂ ಸವಿ ಸವಿದಷ್ಟೂ ಸಿಹಿಯಂತೆ

ಉಲ್ಲಾಸದ ಮನದಿ ಕಾವ್ಯ ಬರೆದೆ ನಾ ಕವಿಯಂತೆ


ಹೇಗಿರುವೆ ಗೆಳೆಯಾ, ಸೌಖ್ಯವೇ ಮಡದಿ ಮಕ್ಕಳೆಂದರೆ

ಹೇಳುವೆ ನೀ, ಇರುವಳು ಇಂದ್ರನ ಐರಾವತದಂತೆ.

ನಿನ್ನ ಸಂಸಾರ ಸಂತೆಯಲಿ ನಾ ನಗುತಲಿ ನಿಂತೆ

ಬೆರೆಸಿ ಸಂತಸದ ಹಾವಭಾವಗಳ ಎಂದಿನಂತೆ


ನೀ ಕೆಣಕುವ ಕೆದಕುವ ಪರಿಯೆನಗೆ

ಬದುಕುವ ಜೀವನದ ದಾರಿ ನನಗೆ

ಕರಗುವ ನೋವು ಮರೆಸುವ ಚಿಂತೆಗಳು

ಬರೆವ ಕವನದ ಸಾಲಿಗೆಮೂಡುವ ಅಕ್ಷರಗಳು


ನೀನಿರದೆ ಹೋದಾಗ ಬರಿದಾಗುವವು

ಮನದ ನಗೆಕಪಾಟುಗಳು

ನೀನಿರದೆ ಹೋದಾಗ ಹರಿವವು ಚಿಂತೆಗಳು

ಇಲ್ಲ ಸಲ್ಲದ ಸಂದಿಯೊಳು


ಸ್ನೇಹಕೆನಿತು ಬಲವುಂಟು ಛಲವುಂಟು

ಮುದದಿ ಆಧರಿಸೆ ಬಂಧವುಂಟು

ನಿಶ್ಕಲ್ಮಷ ನಿಶ್ಕಪಟತೆಯ ಛಾಯೆಯುಂಟು

ಬೇರ್ಪಡಿಸಲು ಬದಲಿಸುವ ಧೈರ್ಯ ಯಾರಿಗುಂಟು..

ಅಲ್ಲವೇ.. ಮಿತ್ರಾ..?


Rate this content
Log in

Similar kannada poem from Inspirational