ಸಜವಲ್ಲ ನಿಜ ಸ್ವಾತಂತ್ರ್ಯ
ಸಜವಲ್ಲ ನಿಜ ಸ್ವಾತಂತ್ರ್ಯ


ಹೇ ಮನುಜ ನೀ ಎಚ್ಚೆತ್ತು ಕೋ
ಸ್ವಾತಂತ್ರ್ಯದ
ನಿಜ ಅರ್ಥ ನೀ ತಿಳಿದುಕೋ......
ಮೇಲು- ಕೀಳಿಲ್ಲ....
ಹೆಣ್ಣು ಗಂಡೆಂಬ
ಭೇದಕೆ ಅರ್ಥವಿಲ್ಲ.....
ದೇವನ ಸೃಷ್ಠಿ ಇದು
ಅದಕಿಹುದು ಅದರದೇ....
ಅಮೂಲ್ಯ ಅರ್ಥ......
ಮೂಢನಾಗಿ ಮಾಡದಿರು
ನೀ..ಅರ್ಥಕೊಂದು ಅನರ್ಥ.....
ಮಂಕೇ..ಇಂದೋ...ನಾಳೆಯೋ
ಅಂತ್ಯವ...ಅರಿತವರಾರು....
ಇಚ್ಛೆಯ ಬದುಕನು ಬದುಕಲು
ಬೇಲಿಯ ಕಟ್ಟಲು ನಾನಾರು-ನೀನಾರು
ಹೆಣ್ಣೋ...ಗಂಡೋ.....
ಬದುಕ ಚದುರಂಗದಾಟದಿ ಎಲ್ಲಾ ಒಂದು
ಹೇ ಮನುಜ ನೀ ಎಚ್ಚೆತ್ತು ಕೋ....
ಸ್ವಾತಂತ್ರ್ಯದ
ನಿಜ ಅರ್ಧ ನೀ ತಿಳಿದು ಕೋ.......