ಶಿಶು ಗೀತೆ
ಶಿಶು ಗೀತೆ


ಇರುವೆ ಇರುವೆ
ಅಲ್ಲೂ ಇರುವೆ
ಇಲ್ಲೂ ಇರುವೆ
ನಾನೆಲ್ಲೂ ಇರುವೆ
ಸಕ್ಕರೆ ಬೆಲ್ಲ ರವೆ
ಕಂಡರೆ ಎಲ್ಲರ ಕರೆವೆ
ಗೂಡನು ಹುಡುಕಿ
ಕಾಳನು ಕೂಡಿಡುವೆ
ಎಲ್ಲೂ ನಿಲ್ಲದೆ
ಸಾಲಲಿ ಸಾಗುತ
ಶಿಸ್ತಿನ ಸಿಪಾಯಿ
ಎಂದೆನಿಸಿರುವೆ
ಗಾಳಿಗೆ ಮಳೆಗೆ
ನಾ ಹೆದರುವೆ
ಬಿಸಿಲು ಬಂದರೆ
ಹೊರಬರುವೆ
ಇರುವೆ ಇರುವೆ
ಅಲ್ಲೂ ಇರುವೆ
ಇಲ್ಲೂ ಇರುವೆ
ನಾನೆಲ್ಲೂ ಇರುವೆ
ಸಕ್ಕರೆ ಬೆಲ್ಲ ರವೆ
ಕಂಡರೆ ಎಲ್ಲರ ಕರೆವೆ
ಗೂಡನು ಹುಡುಕಿ
ಕಾಳನು ಕೂಡಿಡುವೆ
ಎಲ್ಲೂ ನಿಲ್ಲದೆ
ಸಾಲಲಿ ಸಾಗುತ
ಶಿಸ್ತಿನ ಸಿಪಾಯಿ
ಎಂದೆನಿಸಿರುವೆ
ಗಾಳಿಗೆ ಮಳೆಗೆ
ನಾ ಹೆದರುವೆ
ಬಿಸಿಲು ಬಂದರೆ
ಹೊರಬರುವೆ