ಸಾಹಿತ್ಯ ದರ್ಪಣ
ಸಾಹಿತ್ಯ ದರ್ಪಣ
ಮುಂಬಯಿ ಸಾಹಿತ್ಯ ದರ್ಪಣ
ಬಹುಭಾಷಾ ಬರಹಗಳು ಔತಣ
ಕವಿಮನದ ಪ್ರತಿಬಿಂಬದ ಸ್ಫುರಣ
ಬರಹಗಾರರ ಪ್ರತಿಭಾ ಅನಾವರಣ
ಕಥಾಕವನಗಳಾ ಸಿಹಿ ಹೂರಣ
ಕವಿ ಪ್ರತಿಭೆಗಳ ಗೌರವ ಪುರಸ್ಕರಣ
ಇದುವೇ ಹೊಳೆವ ಸಾಹಿತ್ಯ ದರ್ಪಣ
ಮಿನುಗಲಿ ಫಳಫಳನೆ ಈ ದರ್ಪಣ
ಬರಹಗಾರರೆಲ್ಲಾ ಕೈಗೂಡಿಸೋಣ
ಬೆಳೆಸೋಣ ಈ ಸಾಹಿತ್ಯ ದರ್ಪಣ