ರಕ್ಷೆ
ರಕ್ಷೆ


ಪದಗಳ ನಾ ಹಿಡಿದು ತರಲೇ ಅಣ್ಣಾ
ನಿನಗಾಗಿ ನಾ ರಂಗೇರಿಸಲೇ ನಗುವಿನ ಬಣ್ಣ
ನಿನ್ನೆಯವರೆಗೂ.....ಅಲ್ಲಲ್ಲಾ....
ನಾಳೆಯವರಗೂ....ಅಯ್ಯೋ ಅಲ್ಲಾ....
ಈ ತಂಗಿಯ ಎದೆಯಲಿ
ಉಸಿರಿರೋವರೆಗೂ......
ಅಂಗಡಿಯ ಮುಂದೆ ಕಂಡಿದೆ
ರಾಶಿರಾಶಿ..ಬಣ್ಣದ...ದಾರ
ನೆನಪಿದೆಯ...ಬರೀ ಕೈಯಲ್ಲಿ...
ನಾ...ಕಟ್ಟಿದ್ದೆ...
ಪ್ರೀತಿಯಿಂದೊಂದು ದಾರ...
ಕೈಯಲ್ಲಿ ಇರಲಿಲ್ಲ
ಬಿಡಿಗಾಸು....
ಸೂರೆ ಇರದ ನಮಗೆ ..
ಇರಲಿಲ್ಲ ಆಡಂಭರದ ಹಾಸು....
ಎಲ್ಲರಿಗಿಂತ ಹೆಚ್ಚು.....
ನನಗೇ ನೀನೇ ಅಚ್ಚು..ಮೆಚ್ಚು
ಹುಸಿ...ಮುನಿಸಿಗೂ...
ತರ್ಲೇ...ತಮಾಷೆಗೂ....
ಕಾದಾಟಕೂ...ಮುದ್ದಾಟಕೂ
ಅಣ್ಣಾ....ನೀ.....ನೀನೊಬ್ಬಬನೇ
ಜೊತೆ............