ಪ್ರಕೃತಿಯ ಸೊಬಗು
ಪ್ರಕೃತಿಯ ಸೊಬಗು
ಅಂಕು ಡೊಂಕಿನ ಈ ದಾರಿ
ಬೀಸುತ್ತಿರುವ ತಂಪು ಗಾಳಿ
ಬರಿಗಾಲಿನ ನಮ್ಮಯ ಹೆಜ್ಜೆಗೆ
ಇದುವೇ ರತ್ನಗಂಬಳಿ!!
ಸಿರಿ ಸಿಂಗಾರದ ಲಾವಣ್ಯ
ಹಸಿರ ತೋರಣ ಶೃಂಗಾರ
ಅಂಬರದ ಸೂರ್ಯ ಕಿರಣ
ಇಳೆಯ ಒಡಲು ಬಂಗಾರ!!
ಕುಹೂ ಕುಹೂ ಕೋಗಿಲೆಯ
ಇಂಪಾದ ಗಾನ ಗಾಯನ
ಹಕ್ಕಿಗಳ ಚಿಲಿಪಿಲಿ ಕಲರವ
ಭೂರಮೆಗೆ ತಳಿರು ತೋರಣ!!
ಸ್ವರ್ಗದ ಐಸಿರಿಯು
ಮೈ ತುಂಬಿ ನಿಂತಿಹುದು
ಇಲ್ಲಿ ಎಲ್ಲವೂ ಸತ್ಯ
ಪ್ರಕೃತಿಗೆ ಪೂಜೆ ಪ್ರತಿನಿತ್ಯ!!
ನಿಸರ್ಗದ ಹಸಿರು ಸಿರಿ
ಸೂರ್ಯನ ಕಾರ್ಯ ವೈಖರಿ
ಕಣ್ಣೆಗಳೆರೆಡು ಸಾಲದು
ಈ ಸಿರಿಯ ವೈಭವ ನೋಡಲು!!
