ಪ್ರಕೃತಿ
ಪ್ರಕೃತಿ
ಈಶ ಸೃಷ್ಟಿಯ ಸುಕೃತಿ
ವಿಶ್ವವ ಪಸರಿಪ ಪ್ರಕೃತಿ
ಹಸಿರುಡುಗೆಯ ಮೈಸಿರಿ
ಉಸಿರನ್ನೀವ ಭೂಸಿರಿ
ಸಸ್ಯ ಶ್ಯಾಮಲೆ ಕೋಮಲೆ
ಆಸೀಮ ವ್ಯಾಪಿನಿ ಸಬಲೆ
ಗಿರಿವನನದಿಗಳಿಂ ಶೋಭಿಣಿ
ಸಿರಿ ಸುಗಂಧದಿಂ ಭೂಷಿಣಿ
ನಿನ್ನ ಸಂರಕ್ಷಣೆಯ ಹೊಣೆಯು
ನಿನ್ನೊಡಲಕುಡಿಗಳ ಋಣವು
ನೀನೊಲಿದರೆ ಜಗದ ಉಳಿವು
ಮುನಿದರೋ ಜಗದ ಅಳಿವು