STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ

1 min
327

ಮನುಜ ಮನುಜನ ನಡುವೆ

ಅನುಬಂಧದ ಬಂಧನಕ್ಕೆ

ಇರಬೇಕು ಪ್ರೀತಿ ಎಂದೆಂದೂ


ಸಂಸಾರದ ಸುಗಮ ಗಮನಕ್ಕೆ

ಸಾಮರಸ್ಯದ ಸಾಮಗಾನಕ್ಕೆ

ಬದುಕಿಗೆ ಬೇಕು ಪ್ರೀತಿ ಎಂದೆಂದೂ


ಅಪ್ಪನಾ ವಾತ್ಸಲ್ಯ ಅಮ್ಮನಾ ಪ್ರೀತಿ

ಸೋದರ ಸೋದರಿಯರ ಒಲುಮೆ

ಹಸಿರಾಗಿರಬೇಕು ಪ್ರೀತಿ ಎಂದೆಂದೂ 


ಪತಿ ಪತ್ನಿಯರ ಹೃದಯಾನುಬಂಧಕ್ಕೆ

ಮೃದು ಮಧುರ ಭಾವ ಬಂಧನಕ್ಕೆ

ಬತ್ತದಂತಹ ಪ್ರೀತಿ ಬೇಕು ಎಂದೆಂದೂ


ಪ್ರೀತಿ ಇಲ್ಲದಾ ಮೇಲೆ ಬದುಕು ಬರಡು

ಪ್ರೀತಿ ವಾತ್ಸಲ್ಯಗಳು ಬದುಕಿಗೆ ಉಸಿರು

ಸಾಮರಸ್ಯದ ಪ್ರೀತಿ ಬೇಕು ಎಂದೆಂದೂ


Rate this content
Log in

Similar kannada poem from Abstract