STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಓ ನವಿಲೇ

ಓ ನವಿಲೇ

1 min
348


ಮುಗಿಲಲಿ ಕಾರ್ಮೋಡ ಕವಿದಿದೆ

ಮಳೆಯ ಹನಿಗಳು ಇಳಿದಿವೆ

ವರ್ಣಮಯ ರೆಕ್ಕೆ ಗಳ ಹರಡುತ

ಕುಣಿಯುತ ಬಾರೈ ನವಿಲೇ

ನಾಟ್ಯ ರಾಣಿ ಓ ನವಿಲೇ


ಹಂಸದಾಕಾರದ ಮೈಯ್ಯ ಹೊತ್ತು

ನೀಳ ಗ್ರೀವವ ಕುಲುಕಿಸುತ್ತಾ

ನೀಲಿ ಹಸಿರು ಬಣ್ಣಗಳ ತೋರುತ

ಪ್ರಣಯ ನೃತ್ಯವ ಮಾಡೈ ನವಿಲೇ

ನಾಟ್ಯ ರಾಣಿ ಓ ನವಿಲೇ


ಬಿಂಕ ಬೆಡಗಿನ ನಾಟ್ಯ ರಾಣಿ

ಅನುಪಮ ಸೌಂದರ್ಯ ಖಣಿ

ಷಣ್ಮುಖಪ್ರಿಯ ಮಯೂರಿ

ಆನಂದ ನರ್ತನ ತೋರೈ ನವಿಲೇ

ನಾಟ್ಯ ರಾಣಿ ಓ ನವಿಲೇ


ನಿನ್ನ ನಾಟ್ಯವೆಷ್ಟು ಚಂದವೇ

ನಿನ್ನ ಗರಿಗ ಳೆಷ್ಟು ಅಂದವೇ

ಬಹು ವರ್ಣಗಳ ಸಂಕುಲವೇ

ಬಿಂಕ ಬಿಟ್ಟು ನರ್ತನ ಮಾಡೆಲೇ

ನಾಟ್ಯ ರಾಣಿ ಓ ನವಿಲೇ


ಪಕ್ಷಿ ಸಂಕುಲದ ಮಹಾರಾಣಿ

ಕೃಷ್ಣ ಮುಡಿಯ ಶೋಭಿಣಿ

ಭಾರತದ ರಾಷ್ಟ್ರ ಪಕ್ಷಿ ಯೆ

ಬಿಂಕ ತೊರೆದು ಕುಣಿಯಲೇ

ನಾಟ್ಯ ರಾಣಿ ಓ ನವಿಲೇ



Rate this content
Log in

Similar kannada poem from Abstract