ಒಲವ ಗುರು
ಒಲವ ಗುರು
ಲೇಖನಿಯ ಹಿಡಿದು ಕೂತೆ
ಒಲವ ಗುರುವನು ನೆನೆದು ಸೋತೆ
ಹಿಡಿದಿರುವ ಲೇಖನಿಗೆ ಸ್ಪೂರ್ತಿ
ಕನ್ನಡದಲ್ಲಿ ಒಲವು ಮೂಡಿಸಿದ ಧಾತ್ರಿ
ಜ್ಞಾನದ ಉತ್ತುಂಗ ಶಿಖರ
ಕಲಿಸಿದ ಸನ್ನಡತೆ
ನಮ್ಮಲ್ಲಿಂದು ಅಮರ
ನಗುತಾ ನಗಿಸುತಾ
ಅಳುವ ಮರೆಸುವ
ಗುರುವಿನ ಮನವದು
ದೇಶಿಯ ಝೇಂಕಾರ
ನಲುಮೆಯ ಗುರುವಿನ ಕವಿತೆಯಲ್ಲಿ
ಸ್ಪಟಿಸುವುದು ಕನ್ನಡದ ಓಂಕಾರ
ಕನ್ನಡ ವೋ.... ಹಳೆಗನ್ನಡ ವೋ
ಗುರುವಿನ ಪಾಠದ ಪರಿ
ವಿವರಿಸಲಾಗದು ಬೋಧನೆಯ ಸವಿ
ಗೆದ್ದಾಗ ಸಂಭ್ರಮಿಸಿ
ಸೋತಗ ಬೆನ್ನುತಟ್ಟಿ
ತಿದ್ದಿ ತೀಡಿದ ಗುರುವಿಗೆ
ಹೇಳಬೇಕು ನಾ ಧನ್ಯವಾದ ಕೋಟಿ
ನನ್ನೆದೆಯಲಿ ಪೋಣಿಸಿರುವೆ
ಕೃತಜ್ಞತೆಯ ಸುಂದರ ಹಾರ
ಪದಪುಂಜದಲ್ಲಿ ಅಡಗಿಹುದು
ನನ್ನೆದೆಯ ಲಿರುವ ಪ್ರೇಮ ಸಾರ
