STORYMIRROR

JAISHREE HALLUR

Abstract Tragedy Others

4  

JAISHREE HALLUR

Abstract Tragedy Others

ಒಡಲ ತೊಳೆದ ಪ್ರೀತಿ!!!

ಒಡಲ ತೊಳೆದ ಪ್ರೀತಿ!!!

1 min
354

ನನ್ನೇ ನಾ ಅವಲೋಕಿಸುತ್ತಿದ್ದಾಗ ನಿನ್ನೆಯ ನಾಳೆಗಳೆಲ್ಲಾ..ಬರಿದಾಗಿದ್ದವು.


ಕುಲುಮೆಯೊಳಗಿನ ಕಬ್ಬಿಣ ಕರಗಿದಂತೆ

ಒಲುಮೆ ಬದುಕು ಸವೆದುಹೋಗಿತ್ತು..


ಗೆಲುವಿನೊಳಗಿನ ಹಲವು ಸಾರ್ಥಕತೆ

ಅರ್ಥ ಕಳೆದುಕೊಂಡು ಬೆತ್ತಲಾದವು.


ಹೊಸ ಉಡುಗೆಯ ಹೊಸತನದಲ್ಲಿ

ಸಪ್ತಪದಿಯ ಮರೆತ ಸುಪ್ತಭಾವವು.


ಜಾಡು ಹಿಡಿದು ಹೊರಟರೂ ಸಿಗದ

ಕಡಲ ಪ್ರೀತಿ ಒಡಲ ತೊರೆದಂತಿತ್ತು.


ಬಸಿರ ಹೊತ್ತ ಆಸೆ ಮುತ್ತು ಚಿಪ್ಪಿನಲಿ

ಉಸಿರ ಮರೆತು ಮೌನಕೆ ಶರಣಾಗಿತ್ತು.


ಮಸಣಕೇರಿದ ಚಟ್ಟದೊಳಗಿನ ಹೆಣವು

ಅಣಕಿಸಿತ್ತು, ಸೆಣಸಾಟ ಕ್ಷಣಿಕವೆಂದು.


ಹುಡುಕಾಟ ಬರಿದೆ ಸಾಹಸ, ತಾಮಸ

ಬಿಡುಗಡೆಯ ತನಕ , ಬಡಿದಾಡುವವು.


( ಬೆಳಗಿನ ಮನ ಯಾಕೋ ಕ್ಷೋಭೆಗೊಳಗಾಗಿ ಬರೆದ ಕರಗದ ಪದಗಳು. ತೆರೆದ ಮನಗಳಿಗೆ ಕರೆವ ತೆರನಾಗಿ,ಬರೆಯಲೆತ್ನಿಸಿ ಸೋತ ಅನುಭವವಾಯಿತು...)


Rate this content
Log in

Similar kannada poem from Abstract