ನೋಡಣ್ಣ ಭೂ ಲೋಕ
ನೋಡಣ್ಣ ಭೂ ಲೋಕ
ನೋಡಣ್ಣ ಭೂ ಲೋಕ
ಎಷ್ಟೊಂದು ಸುಂದರ
ಕತ್ತಲೋಡಿಸಿಹನು
ದೇವಲೋಕದ ಚಂದಿರ
ಕಟ್ಟಿಹರು ನಮಗಲ್ಲಿ ಗುಡಿ
ನಮಿಪರು ಹರಸೆಂದು
ಭಕ್ತಿಯಲಿ ತಲೆಬಾಗಿ
ಬಗೆಬಗೆಯ ಪುಷ್ಪವನರ್ಚಿಸಿ
ದೇವರ ದೇವನೆಂದು ನಿನಗಗ್ರ ಪೂಜೆ
ಸಂತಾನ ಕರುಣಿಸೆಂದು
ನನಗೆ ತಂಬಿಲ ಪೂಜೆ
ಭಾಗ್ಯವಂತರು ನಾವು
ಭಕ್ತಗಣ ಸ್ತುತಿಸುವುದೆಮ್ಮ
ಶಿವಶಿವೆಯರ ಸುತರೆಂದು
ನೀ ಏರು ಮಯೂರ ವಾಹನ
ನಾನೇರುವೆ ಮೂಷಿಕ ವಾಹನ
ಸುತ್ತೋಣ ಭೂ ಲೋಕ
ಕಡುಬು, ಕಬ್ಬು, ಅಪ್ಪ ಸೇವಿಸಿ
ಉದ್ಧರಿಸೋಣ ಭಕ್ತ ಗಣ.
