ನಲ್ಲೆ
ನಲ್ಲೆ
ನೋಟದಿ ಸೆಳೆವ ನಲ್ಲೆ, ಮಿಂಚಿನಮಾತು ನಲ್ಲೆ
ಮಲ್ಲಿಗೆ ಹೂವೆ ಹೇಳೆ, ಇನಿಯನ ಮನವ ಕೇಳೇ
ನೋಟದಿ ಸೆಳೆವ ನಲ್ಲೆ..l
ನೋಟದಿ ಸೆಳೆವ ನಲ್ಲೆ, ಮಿಂಚಿನಮಾತು ನಲ್ಲೆ
ಮಲ್ಲಿಗೆ ಹೂವೆ ಹೇಳೆ, ಇನಿಯನ ಮನವ ಕೇಳೇ
ನೋಟದಿ ಸೆಳೆವ ನಲ್ಲೆ..ll
ಕಾಮನ ಬಿಲ್ಲಿನಲೀ, ಸುಳಿವ ಕಾಂತಿ ಕಾಣು
ಹೊಳೆಯುವ ಕಣ್ಣ ರೆಪ್ಪೆ ರೆಕ್ಕೆ ಮೂಡಿದಂತೆ l
ತಣ್ಣನೆ ಗಾಳಿಯಲೀ, ಚಂದಿರ ಸೊಗವ ಕಾಣು
ನಲ್ಲೆಯೇ ನಿನ್ನಾ ಸನಿಹ ಜೀವ ಮೂಡಿದಂತೆ ll
ನವಿಲಿನ ನಾಟ್ಯದಲೀ, ಅರಳುವ ಬಣ್ಣದಂತೆ
ಹರಿಣಿಯೇ ನಿನ್ನಾ ರೂಪ ಮುಗ್ಧ ಸ್ವಪ್ನದಂತೆ l
ತುಂತುರ ಹನಿಯು ಕಂಡ, ಚಿಗುರಿನ ಕನಸಿನಂತೆ
ಗೆಳತಿಯೇ ನಿನ್ನಾ ನಗು, ಬಾನ ಹೂವಿನಂತೆ ll
ನೋಟದಿ ಸೆಳೆವ ನಲ್ಲೆ, ಮಿಂಚಿನಮಾತು ನಲ್ಲೆ
ಮಲ್ಲಿಗೆ ಹೂವೆ ಹೇಳೆ, ಇನಿಯನ ಮನವ ಕೇಳೇ
ನೋಟದಿ ಸೆಳೆವ ನಲ್ಲೆ..ll

