ನೀರ ಮೇಲಿನ ಗುಳ್ಳೆಯಂತೆ.
ನೀರ ಮೇಲಿನ ಗುಳ್ಳೆಯಂತೆ.
ಹರಿವ ನೀರಲಿ ಹೆಜ್ಜೆಯಿಟ್ಟು
ದಡ ಸೇರುವ ಬಯಕೆ
ಅಲೆಗಳ ಸೆಳೆತಕೆ
ಒಂದುಸಿರಲಿನಲಿಟ್ಟ ಹೆಜ್ಜೆಗಳು
ಅರಿವಿಲ್ಲದೆ ಜಿಕಹೊಡೆಯುತ್ತಿವೆ
ನಾಲಾಗೋಟದಲಿ ಬಿಕ್ಕಳಿಸಿ
ಕಣ್ತುಂಬ ಮಂಜ ಹನಿಗಳು
ಮುತ್ತಿನಾರತಿ ಮಾಡಲು ಕಾದಿವೆ
ಎತ್ತ ಸಾಗಲಿ ಬಿಚ್ಚುಮನಸಲಿ
ಬೆತ್ತಲೆಯ ಹೊಯ್ದಾಟದಲಿ
ನೀರಿಗ ನಿಲ್ಲದ ಸೊಂಟದಲಿ
ಕಸಿಯು ಕೊಸರುವ ಭಯ
ಜುಳು ಜುಳು ನಿನಾದದಲ್ಲಿ
ಸರಿಗಮಪದನಿಸ ಮೀಟಿದಷ್ಟು
ಎದೆಯಲಿ ನೀರಲೆಗಳ ಕಂಪನ
ಮೋಡಕವಿದಾಯಿತು
ಅನೆಕಲ್ಲು ಮಳೆಗೆ ತತ್ತರಿಸಿ
ಭೂವಿಯೊಡಲು ಬೀರಿದಿದೆ
ಕೆಸರಾಟದಲಿ ಮಿಂದೆದ್ದಿರುವೆ
ನೇಸರನ ಬಾಹುಬಂಧನದಲಿ
ಇನ್ಯಾತರ ಭಯ ನನಗೆ
ನೀರ ಅಲೆಗಳು ಮಿಂಚುತ್ತಿವೆ
ಕಾತುರವಿದೆ ಮೌನದಾಟಕೆ
ಪ್ರತಿ ಹೆಜ್ಜೆಗೂ ಕಾರಣವಿದೆ
ದೌಡಾಯಿಸಿ ದಡವ ಚುಂಬಿಸಲು
ನನಗದುವೆ ಸಂಭ್ರಮ
ಅಲೆಗಳಲಿ ಒಂದಾದ ಮನವು.
ಬದುಕು ನೀರ ಮೇಲಿನ ಗುಳ್ಳೆಯಂತೆ.
