STORYMIRROR

Pushpa Prasad

Romance Classics Inspirational

4  

Pushpa Prasad

Romance Classics Inspirational

*ನೀನಿರಲು ಜೊತೆಯಲ್ಲಿ*

*ನೀನಿರಲು ಜೊತೆಯಲ್ಲಿ*

1 min
328


ನೀನಿರಲು ಜೊತೆಯಲ್ಲಿ 

ಕನಸುಗಳೇ ತುಂಬಿರಲು

ಕಣ್ಣಿಂದ ಜಾರುವ ಹನಿಗೆ

ಹೊರಬರಲು ಜಾಗವುಂಟೆ?


ನೀನಿರಲು ಜೊತೆಯಲ್ಲಿ

ಮನಸಿನ ತುಂಬೆಲ್ಲಾ 

ಸಿಹಿ ಜೇನು ತುಂಬಿರಲು

ಕಹಿ ನೆನಪಿಗೆ ಉಳಿವುಂಟೇ ?


ನೀನಿರಲು ಜೊತೆಯಲ್ಲಿ

ತಂಪಾದ ಗಾಳಿ ಬೀಸುತಿರಲು 

ಸುಟ್ಟು ಹಾಕಲು ನನ್ನನ್ನು 

ಬಿಸಿಲಿಗೆ ಉಸಿರುಂಟೇ?


ನೀನಿರಲು ಜೊತೆಯಲ್ಲಿ

ಪ್ರತಿದಿನ ನಗು ತುಂಬಿರಲು 

ಒಳಗೆ ಅವಿತುಕೊಂಡಿರುವ 

ನೋವಿಗೆ ನೆಲೆಯುಂಟೇ?


ನೀನಿರಲು ಜೊತೆಯಲ್ಲಿ

ಅನುದಿನವೂ ಬಾಳಲ್ಲಿ

ಪ್ರೀತಿ ವಾತ್ಸಲ್ಯ ತುಂಬಿರಲು

ಮೃತ್ಯುವಿನ ಸುಳಿಯುಂಟೇ?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance