ನಾವೆಲ್ಲರೂ ಒಂದೇ 🎇
ನಾವೆಲ್ಲರೂ ಒಂದೇ 🎇
ಎಲ್ಲಾರು ನಮ್ಮವರೇ
ನಾವೆಲ್ಲರೂ ಒಂದೇ
ಹಿಂದೂ, ಮುಸ್ಲಿಂ, ಕ್ರೈಸ್ತ
ಇನ್ನುಳಿದ ಜಾತಿ,
ಮಾನವರು ಮಾಡಿದ
ಬೇಡದ ಕ್ಯಾತಿ.
ಗಂಡು, ಹೆಣ್ಣು ಎರಡೇ ಸ್ಥಾನವು
ನಮಗೆಲ್ಲ ಒಂದೇ ಪ್ರಪಂಚವು
ಹಸಿರೋ, ಕೆಂಪೋ, ಹಳಿದಿಯೋ...
ಬಣ್ಣಗಳಿವು ಬೇರೆ ಬೇರೆ,
ನಾವೆಲ್ಲರೂ ಮನುಷ್ಯರು ಒಂದೇ ಸಮಾನರು.
ನಮಗೆಲ್ಲ ಒಂದೇ ಭೂಮಿ, ಒಂದೇ ಆಕಾಶ,
ಒಂದೇ ಸೂರ್ಯ, ಒಂದೇ ಚಂದ್ರ
ಎಲ್ಲವೂ ನಮ್ಮವೇ,
ಎಲ್ಲಾರು ನಮ್ಮವರೇ.
ನಾವೆಲ್ಲರೂ ಒಂದೇ.