ಮುಸುಕು
ಮುಸುಕು
ಚೈತನ್ಯವಡಗಿಹುದು ಮಂಜಿನ ತೆರೆಯಲಿ
ಬೆಳಕ ಹರಿಸಿ ಹಸನಾಗಿಸು ಬಾಳನ್ನು
ಮುದುರಿ ಕೂತ ಮನಗಳ ಕೊಡವಿ ಏಳದಿರ ಮನಸ್ಹನ್ನ
ಬಾಸ್ಕರನ ಕಿರಣಗಳಲಿ ಜಳಕವಾಗಿಸೆನ್ನ
ಮುತ್ತಿನ ರಾಶಿಯ ಮುದದಿಂದಲಿ ತೊಳೆಯೆ
ತೇವಗೊಂಡಿಹ ಧರೆಯ ಆಲಂಗಿಸೆ
ಮಳೆರಾಯನ ಜೊತೆಯಲ್ಲಿ
ಚಳಿ ರಾಯನು ಜೊತೆಗಿರೆ
ಮಬ್ಬು ಕತ್ತಲಾವರಿಸಿ ಪೆಚ್ಚಾಗಿ ಕುಳಿತಿದೆ ಜಗವು
ರವಿ ಕಿರಣದ ಆಗಮವಾಗದೆ
ಕವಿ ಮನಸ್ಸಿಂದು ಕೈ ಜೋಡಿಸಿ ಬೇಡಿದೆ
ಕುಳಿತಲ್ಲೆ ಕೂಡದೆ ಹೊರಗಾಗಮಿಸು
ನಿನ್ನ ಕಾಣದ ಮನು ಕುಲವು ಮರುಗಿರಲು
ಮೆತ್ತಗೆ ನರಳುತಿದೆ ನೋಡಯ್ಯ ತನುವು
ಆಡುವ ನವಿಲು ನೆಮ್ಮದಿಯ ಕಾಣಲು
ತೆರೆಯ ಸರಿಸಿ ಉದಯಿಸು ಸೂರ್ಯದೇವ
