ಮನವೆಂಬ ಮಂಟಪ
ಮನವೆಂಬ ಮಂಟಪ
ಬಡವರ ಭಕ್ತಿ ಸಿರಿತನದ ಭಕ್ತಿ
ದೊಡ್ಡವರ ಭಕ್ತಿ ಪ್ರಚಾರದ ಬಗ್ಗೆ
ಇದ್ದವನು ಶಿವಾಲಯ ಧರೆಯಲ್ಲಿ ಕಟ್ಟುವನು
ನಿಜ ಭಕ್ತಿ ಮನುಜನು ಮನದಲ್ಲೇ ಗುಡಿ ಕಟ್ಟುವನು
ದೇವರ ಶ್ರದ್ಧಾಭಕ್ತಿಯಿಂದ ಪೂಜಿಸುವವರು ನಿಜವಾದ ಸಿರಿವಂತರು
ಸುಳ್ಳು ಭಕ್ತಿ ಪ್ರಚಾರ ಮಾಡುವವರು ಬಡವರು
ನಿಜ ಭಕ್ತಿ ಯಾವುದೆಂದು ಅರಿತಿ ಹನು ಪರಮಾತ್ಮ
ಅವರಲ್ಲಿ ನಿಲ್ಲಿಸಿಹನು ಆ ಆತ್ಮ
ಬಡವನ್ ಅಂದ ಮಾತ್ರಕ್ಕೆ ಭಕ್ತಿಯು ಬಡವನಾಗದು
ಅವನೊಳಗೂ ಭಕ್ತಿಯೆಂಬ ದೀಪ ಬೆಳಗುತ್ತಿರುವುದು
ಮನವೆಂಬ ಮಂಟಪವೇ ಅವನ ದೇವಾಲಯ
ಕೊಟ್ಟಿರುವನು ಅಲ್ಲಿ ಭಕ್ತಿಯ ಶಿವಾಲಯ
