ಮಕ್ಕಳು
ಮಕ್ಕಳು
ಮಕ್ಕಳು ದೇಶದ ಆಸ್ತಿ
ಮಕ್ಕಳು ಮುಂದಿನ ಜನಾಂಗದ ಶಕ್ತಿ
ಮಕ್ಕಳು ದೇಶದ ಭವಿಷ್ಯ
ಮಕ್ಕಳು ಕಲಿತರೆ ಚಂದ
ಮಕ್ಕಳ ಬರೆದ ಅಕ್ಷರ ನೋಡಲು ಅಂದ
ನಲಿಯುತ – ಕಲಿಯುತ ಓದುವರು
ಮಕ್ಕಳಿಗೆ ಬೇಕು ಮನರಂಜನ ಆನಂದ
ಮಕ್ಕಳಿಗೆ ಬೇಕು ಜೀವನದ ಮೌಲ್ಯಗಳ ಮಹದಾನಂದ
ಹಸಿರಿನ ವಾತಾವರಣವ ಕಲ್ಪಿಸಬೇಕು ಮಕ್ಕಳಲ್ಲಿ
ತಾಯಿಗೆ ಮಕ್ಕಳ ಮೇಲೆ ಇದೆ ಮಮತೆಯ ವಾತ್ಸಲ್ಯ
ಮಕ್ಕಳಿಗೆ ಇದೆ ತಾಯಿಯ ಮೇಲೆ ಪ್ರೀತಿ ವಾತ್ಸಲ್ಯ
ತಂದೆ ತಾಯಂದಿರು ಮಕ್ಕಳಿಗೆ ನೀಡುವರು ರಕ್ಷಣೆ
ಮಕ್ಕಳೇ ಮುಂದಿನ ಸಮಾಜದ ಶ್ರೀರಕ್ಷೆ
ಸುಖ – ದುಃಖವನ್ನು ಸಮಾನವಾಗಿ ಸ್ವೀಕರಿಸುವರು ಮಕ್ಕಳು
ಮಕ್ಕಳು ಜಗದ ಬದಲಾವಣೆಯ ರುವಾರಿಗಳು
