ಮಾತು
ಮಾತು
ಸುಪ್ತವಾಗಿದ್ದ ಭಾವವ
ತಡೆಯಲಾಗದೆ
ಈ ರೀತಿ ಸ್ಪಟಿಸಿದೆ
ನನ್ನ ತನದ ಅಡವಿಟ್ಟು
ನಾನೇಕೆ ಹೀಗಿರುವೆ?
ನಾನೆಂದೂ ಬಣ್ಣಗಳಿಗೆ ಮಾರುಹೋದವಳಲ್ಲ
ಚುಕ್ಕಿ ಚಂದ್ರನ ಕೇಳಿದವಳಲ್ಲ
ಪರಿಸ್ಥಿತಿಯನು ಅರಿತು
ಆಸೆಗಳನೆಲ್ಲಾ ನನ್ನೊಳಗೆ
ಮಣ್ಣು ಹಾಕಿ ಮುಚ್ಚಿದವಳು ನಾ
ಅಯ್ಯೋ ಪಾಪ ಎನುವರು
ಎಷ್ಟು ದಿನ ಹಂಗಿನ ಬದುಕನು ಬದುಕಲಿ
ಇನ್ನೆಷ್ಟು ದಿನ?
ಬಾನಲಿ ಹಾರುವ ಹಕ್ಕಿಗೂ ಒಂದು ಅಸ್ತಿತ್ವ
ನೀರಲಿ ಈಜುವ ಮೀನಿಗೂ ಒಂದು ಅಸ್ತಿತ್ವ
ಕಾಲಡಿಯಲಿ ದೂಳಾಗಿರುವ ನನ್ನತನ
ಎಂಬುದು ನನ್ನ ಅಸ್ತಿತ್ವ
ಮಸಣವದರೂ ಸರಿಯೇ
ಬೇಕು ನನಗೆ ನನ್ನದೆನುವ ಜಾಗ
ದರ್ಪದಿ ಮೆರೆಯುವವರ ಕಾಲಡಿಯಲಿ
ಇನ್ನೆಷ್ಟು ದಿನ ಧೂಳಾಗಿ ಬದುಕಲಿ?
ಯಾರಿಗೂ ಅರಿವಾಗಬಾರದೆಂದು
ಲೇಖನಿಯೊಂದಿಗೆ
ನಾನಾಡುವೆ ಹುಚ್ಚಿಯಂತೆ
ಒಂದಿಷ್ಟು ಮಾತು....
ಸಾಕೆನಿಸುವಷ್ಟು ಕಣ್ಣೀರ ಸುರಿಸುವೆ...!
ತುಸು ಸಮಾಧಾನವಾಗುವುದು
ಎನುವ ಭ್ರಮೆಯಲಿ.....
