ತುಂಬಿಬರಲು ಕಣ್ಣಾಹನಿಗಳು
ನೆನಪಾಗಿವೆ ಆಡಿದ ಮಾತುಗಳು
ನೀನೇ ಎಲ್ಲಾ ಎನಿಸುವ ಮುದ್ದಾದ ನಗು ಅಂದು
ನಿನ್ನ ಬದಲಾದ ಅರಿವಿಕೆಯ ಕ್ಷಣ ಇಂದು
ಅಂದು ಇಂದಿನ ನಡುವೆ ಕಂಡಿದ್ದು
ಕನಸಿನ ಬಾಗಿಲು ಮುಚ್ಚಿದ್ದು
ಮೌನದ ಬಾಗಿಲು ತೆರೆದಿದ್ದು
ಮೌನದ ಬಾಗಿಲ ಬಳಿ ನಿಂತಾಗ ಅನಿಸಿದ್ದೊಂದು
ಯಾಕೋ ನೀನು ಮರಳಿ ಬರುವುದೆಲ್ಲವೆಂದು
ಆದರೂ, ಆದರೂ ಸೇರುವಾಸೆ ಇದೆ ನನಗೊಂದು
ಕಾಯುತಿದೆ ಹೃದಯ ನಿನ್ನ ದಾರಿಗೆಂದು
ಹಿಂತಿರುಗಿ ನೋಡಿದ ಕಂಗಳು ಕಂಡಿದ್ದು
ಹುಡುಕಿದ ದಾರಿ ಸಿಗದೆಂದೂ
ಅದ ಅರಿತ ಮನಸು ಹೇಳಿದ್ದು
ಒಲುಮೆಯ ನೆನಪಿನ ಮೌನದ ಪಿಸುಮಾತಿಗೆ
ಅಪ್ಪಿಗೆಯೊಂದು, ಒಪ್ಪಿಗೆ ಇದೆಯೆಂದೂ