ಮನಸಲಿ ಸಾವಿರ ಚಿಂತೆ
ಅದನ್ ತೋರ್ಸಕಾಗ್ತಿಲ್ಲ
ಮುಖದಲಿ ಮುದ್ದಾದ ನಗು
ಅದು ಮನಸಿಂದ ಬಂದಿದಲ್ಲ
ಕ್ಷಣದಲಿ ಓಡೋ ನೂರು ವಿಚಾರಗಳು
ಅವ ಹಿಡಿಯೋಕ್ ಆಗ್ತಿಲ್ಲ
ಜನ ಸಾವಿರ ಹೇಳ್ತರೆ
ಯಾವ್ದ್ ತಗೋಬೇಕು ಯಾವ್ದ್ ಬಿಡ್ಬೇಕು ಗೋತಾಗ್ತಿಲ್ಲ
ಅನ್ಕೊಂಡಿದ್ದು ಹಲವಾರು
ಆಗಿದ್ದು ಕೆಲವು, ಉಳಿದಿದ್ದು ಸುಮಾರು
ಉಳಿದಿದ್ದಿಕೆ ಕಾರಣ ನಾನಲ್ಲ
ಬದುಕು ಎಲ್ಲದಿಕಿಂತ ದೊಡ್ದು
ಅದ್ರಲ್ಲಿ ಹೇಗೆ ಈಜ್ಬೇಕು ಅನ್ನೋ ಅರಿವಿಲ್ಲ
ಹಿಂದಿನ ಅನುಭವ ಮತ್ತೆ ಇವತ್ತಿನ ಸತ್ಯದ ನಡುವೆ
ಮುಂದಿನ ಹಾದಿ ತಲ್ಪೋ ನಕ್ಷೆ ಸಿಗ್ತಿಲ್ಲ
ಏನ್ ಆಗ್ಬೇಕೋ ಅದ್ ಆಗತೆ ಅನ್ನೋದು ಹಣೆಬರಹ
ಆ ಬರಹದಲಿ ಸ್ವಲ್ಪವಾದ್ರೂ ಖುಷಿ ಮತ್ತೆ ನೆಮ್ಮದಿ ಇರ್ಲಿ ಅನ್ನೋ ನಿರೀಕ್ಷೆ ತಪ್ಪಿಲ್ಲ
ಕೂತಲೆ ಸಾಗಿದ ಆಲೋಚನೆಗಳ ಪ್ರಶ್ನೆ
ನಾನ್ ದಾರಿ ತಪಿದ್ನ್ ಅಥ್ವ್ ದಾರಿ ನನ್ನನ್ ತಪಿಸ್ತಾ ಅಂತ?
ಅದಕೆ ಉತ್ತರ ಮಾತ್ರ ಸಿಗ್ಲಿಲ್ಲ
ಆದ್ರು ಇದಕೆ ಒಂದ್ ಹೆಸರು ಅಂತ ಬಂದಾಗ
ಅನ್ಸಿದ್ದು ಬಿಡಿಸಲಾಗದ ಈ ಒಗಟೆ ನಮ್ಮ ಜೀವನ