STORYMIRROR

Prichand -

Drama Romance Fantasy

4  

Prichand -

Drama Romance Fantasy

ನನದಲ್ಲ..ಇಲ್ಲ..ನಾನಲ್ಲ..

ನನದಲ್ಲ..ಇಲ್ಲ..ನಾನಲ್ಲ..

1 min
35

ಇಟ್ಟ ಹೆಸರು ನನದಲ್ಲ 

ಬದುಕಿದ ಜೀವನ ನನದಲ್ಲ

ಕಂಡ ಕನಸು ನನದಲ್ಲ 

ಅಂದುಕೊಂಡ ಪ್ರೀತಿ ನನದಲ್ಲ 


ಕಳೆದ ಕಾಲ ನನದಲ್ಲ

ಹೊರಟ ದಾರಿ ನನದಲ್ಲ 

ಹುಡುಕಿದ್ದು ನನದಲ್ಲ 

ಸಿಕ್ಕಿದು ನನದಲ್ಲ 


ಮಾತು ಕೇಳಲಿಲ್ಲ 

ಮೌನ ಧ್ವನಿಯಾಗಲಿಲ್ಲ 

ಪಂಜರದ ಬಂಧವಿಲ್ಲ 

ಹಕ್ಕಿಯ ಹಾಗೆ ಹಾರಲಿಲ್ಲ 


ಖುಷಿಯ ಕ್ಷಣ ನೆನಪಿಲ್ಲ 

ಕಣ್ಣೀರಿನ ಮಳೆ ನಿಂತಿಲ್ಲ 

ಭಾವನೆಗಳ ಬಣ್ಣ ಉಳಿದಿಲ್ಲ 

ಪಯಣದ ಹಾದಿ ಸುಲಭವಾಗಿಲ್ಲ 


ಅದೃಷ್ಟದ ಗಾಳಿ ಬೀಸಲಿಲ್ಲ 

ಪರಿಶ್ರಮ ಫಲ ನೀಡಲಿಲ್ಲ

ಆಗಸದ ಬಾಗಿಲು ತೆರೆಯಲಿಲ್ಲ 

ದೂರದ ನಕ್ಷತ್ರ ಇನ್ನೂ ಕಂಡಿಲ್ಲ 


ಮನಸು ನೆಮ್ಮದಿಯಾಗಿಲ್ಲ

ಶಾಂತಿಯ ಸೂಚನೆ ಸಿಕ್ಕಿಲ್ಲ  

ಇದ್ದಿದ್ದು ಅರ್ಥ ಕೊಟ್ಟಿಲ್ಲ 

ಇರುವುದು ಉತ್ತರವೆನಿಸಿಲ್ಲ

ಇರಬೇಕಿದ್ದ ಪ್ರಶ್ನೆಯ ಅರಿವಿಲ್ಲ

ನನದಲ್ಲ..ಇಲ್ಲ..ನಾನಲ್ಲ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Drama