ಅಗ್ನಿ
ಅಗ್ನಿ
ಸತ್ಯದ ಜಯ ಅಗ್ನಿ
ಸುಳ್ಳಿನ ಸೋಲು ಅಗ್ನಿ
ಭಕ್ತಿಯ ಭಾವಕ್ಕೆ ಶುಭವಾದ ಬೆಳಕು ಅಗ್ನಿ
ದೇವರಿಗೆ ಪ್ರಿಯವಾದ ಜ್ಯೋತಿ ಅಗ್ನಿ
ಉಧ್ವೇಗದ ಕಣ್ಣಂಚಲ್ಲಿದ್ದ ಕಿಡಿ ಅಗ್ನಿ
ನೊಂದವರ ಬದುಕು ಕಟ್ಟುವ ಛಲದ ಹೆಜ್ಜೆ ಅಗ್ನಿ
ಸುಖದಿಂದಿರುವವರ ನೆಮ್ಮದಿಯ ಮೂಲ ಅಗ್ನಿ
ಔತಣದ ಅಡುಗೆಯ ಬಿಸಿ ಅಗ್ನಿ
ಜೊತೆಯಲ್ಲೇ ಇರುವೆ ಎಂಬ ವಚನಕ್ಕೆ ಸಾಕ್ಷಿ ಅಗ್ನಿ
ಪ್ರೀತಿಯ ಹೊಸ್ತಿಲಿನ ಸ್ವಾಗತದ ಹಣತೆ ಅಗ್ನಿ
ಮಗುವಿನ ಜನನದ ಖುಷಿಯಾದ ದೀಪ ಅಗ್ನಿ
ಹುಟ್ಟು ಹಬ್ಬದ ಆಶಯದ ಬತ್ತಿ ಅಗ್ನಿ
ಸಾವಿನ ಚಿತೆಯ ಸ್ಪರ್ಶ ಅಗ್ನಿ
ಬದುಕಿನ ಮೊದಲ ಕೊನೆಯ ನಡುವಿನ ಪಯಣದ ಕಿಚ್ಚು ಅಗ್ನಿ
