ಹುಚ್ಚು ಮನಸ ಬಚ್ಚಿಟ್ಟ ಬರಹ
ಹುಚ್ಚು ಮನಸ ಬಚ್ಚಿಟ್ಟ ಬರಹ
ಕಣ್ಣಹನಿಯ ಬಿಸಿ ಕಂಗಳಿಗೆ ತಾಗಲು ಬಿಡದಾಗ
ಮನಸಿನ ಭಾವನೆಗಳ ಕುರುಹು ತಿಳಿಯದಾಗ
ತನಗೇನು ಬೇಕೆನ್ನುವ ಇಚ್ಛೆ ಮರೆಯಾದಾಗ
ಕತ್ತಲಲಿ ಪ್ರತ್ಯಕ್ಷವಾಗಿ
ಬೆಳಕಲಿ ಮರೆಯಾಗಿ
ನಾ ಒಂಟಿಯೆನಿಸಿದಾಗ ನನ್ನ ತಲೆಯಲಿ
ಓಡುವ ವಿಚಾರಗಳ ಅರಿತು
ಅಕ್ಷರ ಕೆತ್ತುವ, ಜೋಡಿಸುವ ಗುಂಗಲ್ಲಿ
ನನ್ನ ಬಚ್ಚಿಡುವ
ನನೊಳಗಿನ ಹುಚ್ಚು
ನನ್ನ ಬರಹ
