ಮಾಧವ
ಮಾಧವ
ಜಲಲ ಜಲ ಜಾಲಿ...
ಬಂದ ನನ್ನ ಮುರಾರಿ
ಹಾಡಿ ಹಾಡಿ ನಲಿದಾಡಿ
ಸಂತಸಕೆ ಪಾರವಿಲ್ಲ ನೋಡಿ
ಕೊಳಲ ನಾದಕೆ ಮರುಗಾಗಿ
ಅಪ್ಪಿದೆ ನಾ ಅವನ ಕೂಡಿ
ಸಖಿಯರೆಲ್ಲಾ ಒಂದು ಗೂಡಿ
ಸುತ್ತುವರೆದು ಅವನ, ಹಾಡಿ
ಮಲ್ಲಿಗೆ ಮಾಲೆ ಹಾಕೆ
ಅವನ ಕೊರಳಿಗೆ ಹಾಕುವ ಕೈ ಬೇಡಿ
ತೇಲುವ ಅವನ ಮೋಡಿಯಲಿ
ನಮ್ಮನ್ನೇ ನಾವು ಮರೆವ ಅವನ ಕೂಡಿ
ಹಗಲು ರಾತ್ರಿಗಳ ಮರೆವ
ಭುವಿ ಭಾನು ನೀನೇ ಮಾಧವ
ಮೃಮನ ತಣಿಸುವ
ಕಣ್ಣಲ್ಲೇ ಸೆರೆಯಾಗುವ
ಯವ್ವನವ ಸೂರೆಗೊಳ್ಳುವ
ನಾವೂ ರಾಧ ರಾಣಿಯರಾಗುವ
ಬನ್ನಿ ..ಕೂಡುವ ಹಾಡುವ
ನಲಿದಾಡುವಾ.....ಆಅಅಅ

