STORYMIRROR

Surabhi Latha

Tragedy Classics Others

4  

Surabhi Latha

Tragedy Classics Others

ಕರುಳು

ಕರುಳು

1 min
362

ಹೊಸ ವರುಷ ಬಂದರೇನು ಹಳೆಯ ನೋವು 

ಮಾಗದಾಯ್ತು 

ಸಂತಸ ಕೊಟ್ಟ ಮಕ್ಕಳಿಂದಲೇ ನೆಮ್ಮದಿ 

ಮರೆಯಾಯಿತು 


ತಾಯಿ ತಂದೆಯ ಪ್ರೀತಿ ಅವರಿಗೆ ಭೋಗ ತಂದು ಕೊಟ್ಟಿತು

ಹೆತ್ತವರ ತ್ಯಾಗ ಮಕ್ಕಳಿಗೆ ನೇನಪಾಗದೇ 

ಹೋಯ್ತು 

ಕೂಡಿಟ್ಟ ಹಣ ಮಕ್ಕಳ ಭವಿಷ್ಯಕ್ಕೆ ಬಚ್ಚಿಟ್ಟು 

ಬದುಕಿದ್ದಾಯಿತು 

ಮುದಿ ಗೂಬೇಗಳೆಂಬ ಚುಚ್ಚು ಮಾತು ಕೇಳಿ 

ಮುದುರಿ ಕೂರುವಂತಾಯಿತು  


ಇಷ್ಟಾದರೂ ಮಕ್ಕಳ ಮೋಹ ಕರಗಲೆ ಇಲ್ಲ 

ಎದೆಯಲ್ಲಿ 

ಸತ್ಯ ಕಣ್ಣೆದುರು ಇದ್ದರೂ ಕರುಳು ಮಾತ್ರ 

ಕನವರಿಕೆಯಲ್ಲಿ 


 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy