ಖಾಲಿ ಹಾಳೆ
ಖಾಲಿ ಹಾಳೆ
ಇರಲಿ ಬಿಡು ಖಾಲಿ ಹಾಳೆ
ಚಿಂತೆ ಏತಕೆ?
ಜಗದ ಎಲ್ಲಾ ನೋವುಗಳು
ಅದರಲ್ಲೇತಕೆ?
ಖಾಲಿ ಹಾಳೆ ಸ್ವಚ್ಛ ಚೆಂದ
ಶುದ್ಧ ಮನದೊಲು
ಕೆಡಿಸಬೇಡ ಅದನು ನೀನು
ಕೆಂಪು ಶಾಯಿಯಲಿ
ಖಾಲಿ ಹಾಳೆ ಸೇರಲಿ ಬಿಡು
ಕಲಾವಿದನ ಕೈಯನು
ಮೂಡಿದಾಗ ಸುಂದರ ಕೃತಿ
ಕಣ್ಮನಗಳಾ ಸೆಳೆಯಲಿ
ಮನದ ಹಾಳೆ ಖಾಲಿಯಿರಲಿ
ಭಕ್ತಿ ಭಾವ ತುಂಬಲಿ
ಖಾಲಿ ಮನವು ದೇವನಿಗಿಷ್ಟ
ಅಲ್ಲಿ ಬಂದು ನೆಲಸುವ
ಖಾಲಿ ಹಾಳೆ ಇರಲಿ ಬಿಡು
ಗೀಚ ಬೇಡವೋ
ಶುದ್ಧ ಮನವ ತೆರೆದು ಇಡು
ಆ ದೇವಗಾಗಿಯೇ
