ಜನುಮದ ಜೋಡಿ
ಜನುಮದ ಜೋಡಿ
ಒಂಟಿ ಬಾಳ ಬದುಕಿನಲಿ
ಹೊಸ ಕನಸುಗಳ ಹೊತ್ತು
ನೋವು ನಲಿವಿನ ತಿರುವುಗಳಲಿ
ಮನಸು ಆಸೆಯಲಿ ನಲಿದಿತ್ತು!!
ನಿನ್ನ ಒಂದು ಕರೆಯಿಂದ
ಸ್ನೇಹದ ಸಲುಗೆ ಪ್ರೀತಿಯಾಗಿ
ತಂಪಾದ ತಂಗಾಳಿ ಜೊತೆಗೆ
ಮುಂಗಾರುಮಳೆ ಶುರುವಾಯಿತು!!
ಕನಸುಗಳಿಗೆ ದಾರಿ ಸಿಕ್ಕಿ
ಪಯಣವೇ ಬದಲಾಯಿತು
ಕನಸುಗಳೆಲ್ಲಾ ನನಸಾಗಿ
ಕುಡಿಯ ಜನನವಾಯಿತು!!
ಒಂಟಿಯಿಂದ ಜಂಟಿಯಾಗಿ
ಸಪ್ತಪದಿಯ ತುಳಿದು
ಸಂಸಾರದ ನೌಕೆಯಲಿ
ನಮ್ಮ ಬಂಧ ಗಟ್ಟಿಯಾಗಿದೆ!!
ಪ್ರೇಮದಂಬರ ಜೊತೆಗೆ
ಸೀತೆಗೊಬ್ಬ ರಾಮನಂತೆ
ರಾಧೆಗೊಲಿದ ಕೃಷ್ಣನಂತೆ
ಹರಸಿ ಈ ಜನುಮದ ಜೋಡಿಯ!!
✍️ ಪುಷ್ಪ ಪ್ರಸಾದ್

