STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಹೊಸ ಸಂಕಲ್ಪ

ಹೊಸ ಸಂಕಲ್ಪ

1 min
227

ಜನವರಿಯಿಂದ ಡಿಸೆಂಬರ್ 

ದಿನಚರಿಯ ಪುಟಗಳು

ಸರಸರನೆ ಹಾರಿಹೋದವು 

ಮತ್ತೊಂದು ಹೊಸ ಪುಟ

ಗೋಡೆಯ‌ನಲಂಕರಿಸಿತು

ಅದೇ ಭೂಮಿ ಅದೇ ಗಾಳಿ

ಅದೇ ನೆಲ ಅದೇ ಜಲ 

ಬದಲಾಗಲಿಲ್ಲ ಪ್ರಕೃತಿ

ಬದಲಾಗುತಿಹುದು  

ಮಾನವನ ಬದುಕು

ವರುಷ ವರುಷಕೂ

ದ್ವೇಷ ದುರಾಸೆ ಲಾಲಸೆ

ಸ್ವಾರ್ಥವು ಮೇಲೇರಿ

ಪ್ರೀತಿ ವಿಶ್ವಾಸ ಸ್ನೇಹ

ಮಾನವೀಯತೆ ಗಳು

ಮರೆಯಾಗಿ ಹೋಗಿ

ನಾವೆಂಬ ಭಾವವಳಿದು

ನಾನೆಂಬ ಅಹಮಿಕೆಯ

ರುದ್ರ ತಾಂಡವ ಎಲ್ಲೆಡೆ

ಹೊಸ ವರುಷದಲಿ

ಹೊಸ ಸಂಕಲ್ಪ ಮಾಡೋಣ 

ನಾನೆಂಬ ಸ್ವಾರ್ಥ ಮರೆತು

ನಾವೆಂಬ ವಿಶ್ವ ಪ್ರೇಮವನು

ಬೆಳೆಸುತ ಬೆಳೆಯೋಣ


Rate this content
Log in

Similar kannada poem from Abstract