STORYMIRROR

Ranjitha M

Tragedy Classics Others

4  

Ranjitha M

Tragedy Classics Others

ಹಗಲುಗನಸು

ಹಗಲುಗನಸು

1 min
245

ಕನಸುಗಳು ಹಲವು ಬಾರಿ

ನನಸಾಗಲಾರವು

ಮನಸುಗಳು ಒಡೆದಾಗ

ನಾಶವಾಗುವವು

ಕನಸುಗಳು ಹಲವು ಬಾರಿ

ಕನಸೇ ಆಗುವವು

ನಸುಕಿನ ಜಾವದಲಿ

ಬಂದು ಹೋಗುವವು

ಕನಸುಗಳು ಹಲವು ಬಾರಿ

ಮುನಿಸಿಕೊಳ್ಳುವವು

ಮಸುಕಾಗಿ ಬಿಡುವವು

ಹಸಿದ ಹುಲಿಯಂತೆ..!

ಓಡುವ ಜಿಂಕೆಯಂತೆ..!!

ಹಾರುವ ಓತಿಯಂತೆ...!!!

ಮಲಗಿದ ಹೆಣದಂತೆ...!!!!

ಕನಸುಗಳು ನನಸಾಗಲಾರವು

ಕೆಲವು ಹಗಲುಗನಸುಗಳು

ಅದಾಗಲೆ ಚಿರನಿದ್ರೆಗೆ ಜಾರಿವೆ

ನನಸಾಗದ ಕನಸುಗಳು

ಸ್ಮಶಾನದಲ್ಲಿನ ಗೋರಿಗಳು

ಕನಸುಗಳು ಹಲವು ಬಾರಿ

ನನಸೇ ಆಗಲಾರವು.....!!

ನನಸೇ ಆಗಲಾರವು...!!!


Rate this content
Log in

Similar kannada poem from Tragedy