ಹೆಣ್ಣು ದೀಪ.....
ಹೆಣ್ಣು ದೀಪ.....
ತಾನೇ ಉರಿದು ಲೋಕಕೆ
ಬೆಳಕನೆರೆಯುವ ದೀಪಕೆ
ಹೆಣ್ಣಲ್ಲದೆ ಸಮನಾರು ಅದಕೆ.......
ಕೋಟಿ ದೀಪಗಳಿಗೊಂದು ಹಬ್ಬ.....
ದಣಿಯದೆ ಕಾವಕಾಯಕವೆರೆಯುವ
ಹೆಣ್ಣಿಗಾವ ಕಬ್ಬ.......
ಬಲಿತಿಹ ಬದುಕಲಿ ತನ್ನನವರಿಗಾಗಿ ಎಲ್ಲಾ....
ತಾನು ಎಂಬ ಲೋಕದ ಅರಿವೇ ಇಲ್ಲಾ......
ಬದುಕು ಎಂಬ ನಾಟಕದಿ
ಹೆಣ್ಣೇ .....ಜೀವನದಿ.....
ತಾ ಉರಿದುರಿದು
ತನ್ನವರ ಪೊರೆಯುವ ಜೀವಧಾತ್ರಿ....
ಕನಸಿನ ಹಂಗೂ ಇಲ್ಲಾ.....
ಭವಿಷ್ಯದ ಸಂಗವೂ ಇಲ್ಲಾ....
ಸಂಕಷ್ಟದ ಸಾನಿಧ್ಯದ ಹೊರತು
ಬದುಕಲಿ ಬೇರೆನಿಲ್ಲಾ...ಹೊಸತು....
ಮೋಹ ಮುಸುಕದ ಕಣ್ಣಂಚದು
ತನ್ನವರ ತೊರೆದು ಜೀವ ಬದುಕದು
ಕೋಟಿ ದೀಪಗಳೊಳಗೂಡಿ ದೀಪಾವಳಿ
ಸಂಸಾರ ನೌಕೆಗೆ ಹೆಣ್ಣೇ...ಗಾಲಿ....
ತಾನೇ....ಉರಿದು
ಬೆಳಕನೆರೆಯುವ ದೀಪಕೆ
ಹೆಣ್ಣಲ್ಲದೆ ಸಮನಾರು ಅದಕೆ....!!!!!!